ಹೈದರಾಬಾದ್: ಕಲುಷಿತ ಮೊಮೊಗಳನ್ನು ಮಾರಾಟ ಮಾಡಿ, ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಪ್ರಕರಣದ ಸಂಬಂಧ ಆರು ಮಂದಿ ಮೊಮೊ ಮಾರಾಟಗಾರರನ್ನು ಹೈದರಾಬಾದ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಿಹಾರದ ಕಿಶನ್ಗಂಜ್ನವರಾದ ಅರ್ಮಾನ್, ಸಾಜಿದ್ ಹುಸೇನ್, ಮಹಮದ್ ರಯೀಸ್, ಮಹಮದ್ ಶಾರುಖ್, ಮಹಮದ್ ಹನೀಫ್ ಹಾಗೂ ಮಹಮದ್ ರಾಜಿಕ್ ಬಂಧಿತರು. ಇವರ ವಿರುದ್ಧ ವಿಷಯುಕ್ತ, ಕಲುಷಿತ ಮೊಮೊಗಳನ್ನು ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಇಂತಹ ಮೊಮೊ ಮಾರಾಟ ಮಾಡಿ ಗ್ರಾಹಕರಲ್ಲಿ ಒಬ್ಬರ ಸಾವು ಮತ್ತು ಇನ್ನು ಕೆಲವರ ಅನಾರೋಗ್ಯಕ್ಕೆ ಕಾರಣವಾಗಿರುವುದರಿಂದ ಆರೋಪಿಗಳ ವಿರುದ್ಧ ನರಹತ್ಯೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

31 ವರ್ಷದ ರೇಷ್ಮಾ ಬೇಗಂ ಮತ್ತು ಆಕೆಯ ಚಿಕ್ಕ ಮಗಳು ಅಕ್ಟೋಬರ್ 25ರಂದು ಬಂಜಾರಾ ಹಿಲ್ಸ್ನ ಸಿಂಗದ ಕುಂಟಾದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿಯಿಂದ ಮೊಮೊಗಳನ್ನು ಖರೀದಿಸಿದ್ದರು. ಅವುಗಳನ್ನು ಮನೆಯಲ್ಲಿ ಸೇವಿಸಿದ ನಂತರ, ರೇಷ್ಮಾ ಬೇಗಂ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಹಾಗೂ ಇತರರು ತೀವ್ರ ವಾಂತಿ ಮತ್ತು ಅತಿಸಾರ ಸಮಸ್ಯೆ ಅನುಭವಿಸಿದ್ದರು. ಎಲ್ಲರನ್ನೂ ಎನ್ಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೇಷ್ಮಾ ಬೇಗಂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಉಳಿದವರಿಗೆ ಚಿಕಿತ್ಸೆ ನೀಡಲಾಗಿತ್ತು.

ರೇಷ್ಮಾ ಸಾವಿನ ಬಗ್ಗೆ ಅವರ ಸಹೋದರ ಫಾರೂಕ್ ಹುಸೇನ್ ಅವರು ಬಂಜಾರ ಹಿಲ್ಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.