ನವದೆಹಲಿ: 'ಕೊರೊನಾ-2' ವೈರಸ್ ಹರಡುವುದಕ್ಕೆ ಕಡಿವಾಣ ಹಾಕಲು ದೇಶದಾದ್ಯಂತ ಜಾರಿಗೆ ಬಂದಿರುವ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳ ದಿಗ್ಬಂಧನದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರ ನೆರವಿಗೆ ಧಾವಿಸಿರುವಕೇಂದ್ರ ಸರ್ಕಾರವು ವಿವಿಧ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ ಮತ್ತು ಆಹಾರ ಭದ್ರತೆ ಒಳಗೊಂಡಂತೆ ₹1.70 ಲಕ್ಷ ಕೋಟಿ ಮೊತ್ತದ ಪರಿಹಾರ ಕೊಡುಗೆ ಘೋಷಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪ್ರಕಟಿಸಿದ ಗರೀಬ್ ಕಲ್ಯಾಣ ಯೋಜನೆಯಿಂದ ಬಡವರು, ರೈತರು, ವಿಧವೆಯರು, ನರೇಗಾ ಫಲಾನುಭವಿಗಳು, ಮಹಿಳಾ ಸ್ವಸಹಾಯ ಸಂಘಗಳು, ಸಂಘಟಿತವಲಯದ ಕಾರ್ಮಿಕರು ಸೇರಿದಂತೆ ದೇಶದ ₹80 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. ಆರೋಗ್ಯ ಕಾರ್ಯಕರ್ತರು ₹50 ಲಕ್ಷದ ವೈದ್ಯಕೀಯ ವಿಮೆ ರಕ್ಷಣೆಗೆ ಒಳಪಡಲಿದ್ದಾರೆ.

ಸರ್ಕಾರವು ₹2 ಲಕ್ಷ ಕೋಟಿ ಮೊತ್ತದ ಆರ್ಥಿಕ ಕೊಡುಗೆ ಪ್ರಕಟಿಸಬೇಕು ಎಂದು ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ) ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ಎಲ್ಲ ಬಗೆಯ ಸಾಲಗಳ ಮರುಪಾವತಿಗೆ 3 ತಿಂಗಳ ಬಿಡುವು ನೀಡಬೇಕು ಎನ್ನುವುದು
ಪ್ರಮುಖ ಬೇಡಿಕೆಯಾಗಿದೆ.

ಪರಿಹಾರ ಕೊಡುಗೆಯು ಜನರ ಸಂಕಷ್ಟಕ್ಕೆ ತಕ್ಷಣದಿಂದಲೇ ಪರಿಹಾರ ಕಲ್ಪಿಸಲಿದ್ದು, ಯಾರೊಬ್ಬರೂ ಹಸಿವಿನಿಂದ ಇರಬಾರದು
ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ

* ಬಡಜನರಿಗೆ ಪಡಿತರ
ಬಡವರಿಗೆ ತಿಂಗಳಿಗೆ 5 ಕೆ.ಜಿ. ಅಕ್ಕಿ ಅಥವಾ
5ಕೆ.ಜಿ. ಗೋಧಿ ಉಚಿತ
(ಮುಂದಿನ ಮೂರು ತಿಂಗಳು)
ಇದು ಪಡಿತರದಲ್ಲಿ ದೊರೆಯುವುದಕ್ಕಿಂತ ಹೆಚ್ಚುವರಿ
ಆಯಾ ಪ್ರದೇಶದ ಅಗತ್ಯಕ್ಕೆ ತಕ್ಕಂತೆ 1 ಕೆ.ಜಿ. ಬೇಳೆ ಉಚಿತ

* ಉಜ್ವಲಾ ಫಲಾನುಭವಿಗಳಿಗೆ
ಮೂರು ತಿಂಗಳವರೆಗೆ ಉಚಿತ ಅಡುಗೆ ಅನಿಲ (ಎಲ್ ಪಿಜಿ)
₹8.3 ಕೋಟಿ ಬಿಪಿಎಲ್ ಕುಟುಂಬಗಳಿಗೆ ಪ್ರಯೋಜನ

* ಸ್ವಸಹಾಯ ಗುಂಪುಗಳಿಗೆ ಸಾಲ
ಮಹಿಳಾ ಸ್ವಸಹಾಯ ಗುಂಪುಗಳಿಗೆ ಆಧಾರರಹಿತ ಸಾಲ ದುಪ್ಪಟ್ಟು

ಈಗಿನ ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಕೆ

* ವೃದ್ದಾಪ್ಯ/ ವಿಧವಾ ವೇತನ
ಬಡ ಹಿರಿಯ ನಾಗರಿಕರು,
ವಿಧವೆಯರು, ಅಂಗವಿಕಲರಿಗೆ
₹1,000 ಎಕ್ಸ್ ಗ್ರೇಸಿಯಾ
3 ಕೋಟಿ ಜನರಿಗೆ ಅನುಕೂಲ

* ಮಹಿಳಾ ಜನಧನ್
ಜನಧನ್ ಖಾತೆ ಹೊಂದಿರುವ ಮಹಿಳೆಯರಿಗೆ ಮೂರು ತಿಂಗಳಿಗೆ ₹1500
ನೆರವು,ತಿಂಗಳಿಗೆ ₹500 ರಂತೆ
₹20 ಕೋಟಿ ಫಲಾನುಭವಿಗಳು.

* ರೈತರಿಗೆ ನಗದು
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ₹2000 ಏಪ್ರಿಲ್
ಮೊದಲ ವಾರದಲ್ಲಿ ಪಾವತಿ
ರೈತರ ಖಾತೆಗೆ ನೇರನಗದು
8.9 ಕೋಟಿ ರೈತರಿಗೆ ಸಹಾಯ

* ಪಿಎಫ್ ಕೊಡುಗೆ
100ಕ್ಕಿಂತ ಕಡಿಮೆ ಉದ್ಯೋಗಿಗಳುಇರುವ ಉದ್ದಿಮೆಗಳ ಸಿಬ್ಬಂದಿಯ ಭವಿಷ್ಯ ನಿಧಿ(ಇಪಿಎಫ್ )ಕಾರ್ಮಿಕರ ( ಶೇ 12) ಮತ್ತು ಮಾಲೀಕರ (ಶೇ. 12) ಒಟ್ಟು24ರಷ್ಟು ಕೊಡುಗೆಯನ್ನು ಮೂರು ತಿಂಗಳವರೆಗೆ ಕೇಂದ್ರ ಸರ್ಕಾರವೇ ಭರಿಸಲಿದೆ.

ಇದರ ಪ್ರಯೋಜನ ಪಡೆಯುವವರಲ್ಲಿ ತಿಂಗಳಿಗೆ ₹15 ಸಾವಿರಕ್ಕಿಂತ ಕಡಿಮೆ ಸಂಬಳ ಪಡೆಯುವವರ ಸಂಖ್ಯೆಯೇ (ಶೇ.90)ಹೆಚ್ಚು.

* ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಯ (ಇಪಿಎಫ್ ಒ) ಸದಸ್ಯರು ತಮ್ಮ ತುರ್ತು ವೆಚ್ಚಗಳಿಗಾಗಿ ಶೇ. 75ರಷ್ಟು ಇಲ್ಲವೇ ಮೂರು ತಿಂಗಳ ವೇತನದಷ್ಟು ಮೊತ್ತವನ್ನು ಮರಳಿ ಪಾವತಿಸದ ನಿಯಮದಡಿಪಡೆಯಬಹುದು. ಇದರಿಂದ ₹4.8 ಕೋಟಿ ಉದ್ಯೋಗಿಗಳಿಗೆ ನೆರವಾಗಲಿದೆ. ಜಿಲ್ಲಾ ಖನಿಜ ನಿಧಿಯಡಿ ಲಭ್ಯ ಇರುವ ಮೊತ್ತವನ್ನು ಕೊರೊನಾ ಪರೀಕ್ಷೆ ವೈದ್ಯಕೀಯ ತಪಾಸಣೆ, ಆರೋಗ್ಯ ರಕ್ಷಣೆ, ಉದ್ದೇಶದ ಕಾರ್ಯಗಳಿಗೆ ಬಳಸಿಕೊಳ್ಳಲು ಸೂಚನೆ

* ಕೈಗಾರಿಕೆ ಮತ್ತು ಉದ್ದಿಮೆಗೆ ನೆರವಾಗಲು ಸರ್ಕಾರ ಇನ್ನೊಂದು ಪ್ರಕಟಿಸುವ ಸಾಧ್ಯತೆ ಇದೆ.

* ನರೇಗಾ ದಿನಗೂಲಿ ಹೆಚ್ಚಳ
ಗ್ರಾಮೀಣ ಪ್ರದೇಶದಲ್ಲಿ ನರೇಗಾ ದಿನಗೂಲಿ ₹182 ರಿಂದ ₹202 ಕ್ಕೆ ಏರಿಕೆ
ಪ್ರತಿಯೊಬ್ಬರಿಗೆ ತಿಂಗಳಿಗೆ ₹2,000 ಹೆಚ್ಚುವರಿ ಮೊತ್ತ

5 ಕೋಟಿ ಫಲಾನುಭವಿಗಳು
₹50 ಲಕ್ಷ ವಿಮೆ ಪರಿಹಾರ

* ಕೊರೊನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ಇರುವ ವೈದ್ಯರು ದಾದಿಯರು , ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ₹50 ಲಕ್ಷಮೊತ್ತದ ವಿಮೆಯೋಜನೆ ಘೋಷಣೆ
* ಕಟ್ಟಡ ನಿರ್ಮಾಣ ಕಾರ್ಮಿಕರು
ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಂಡು ಅತಂತ್ರರಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗಾಗಿ ₹31 ಸಾವಿರ ಕೋಟಿ ಮೊತ್ತದ ಕಲ್ಯಾಣ ನಿಧಿ ಬಳಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.