ಗಿರಿದಿಹ್(ಜಾರ್ಖಂಡ್): ಸೋನಿಯಾ ಗಾಂಧಿಯವರು ಅವರ ‘ರಾಹುಲ್ ವಿಮಾನ’ವನ್ನು ಉಡಾವಣೆ ಮಾಡಲು 20 ಬಾರಿ ಪ್ರಯತ್ನಪಟ್ಟಿದ್ದಾರೆ. 21ನೇ ಬಾರಿಯೂ ಆ ವಿಮಾನ ಜಾರ್ಖಂಡ್ನಲ್ಲಿ ಪತನವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೆ ರಾಹುಲ್ ಗಾಂಧಿ ಕುರಿತಂತೆ ವ್ಯಂಗ್ಯ ಮಾಡಿದ್ದಾರೆ.

ಗಿರಿದಿಹ್ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಶಾ, ಕರ್ನಾಟಕದ ವಕ್ಫ್ ಮಂಡಳಿಗಳು ರಾಜ್ಯದ ಪುರಾತನ ದೇಗುಲಗಳ ಭೂಮಿಯನ್ನು ಕಬಳಿಸಿವೆ. ಭಾರಿ ವಿರೋಧದ ನಡುವೆಯೂ ಈ ಕಾಯ್ದೆಯ ತಿದ್ದುಪಡಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

'ಸೋನಿಯಾ ಜೀ ತನ್ನ ಮಗನನ್ನು ಪದೇ ಪದೇ ಉಡಾವಣೆ ಮಾಡಲು ಇಷ್ಟಪಡುತ್ತಾರೆ. ಸೋನಿಯಾ ಅವರು 'ರಾಹುಲ್ ವಿಮಾನ'ವನ್ನು ಉಡಾವಣೆ ಮಾಡಲು 20 ಬಾರಿ ಪ್ರಯತ್ನಿಸಿದರು. ಆದರೆ, ಅದು ಲ್ಯಾಂಡ್ ಆಗಲು ವಿಫಲವಾಗಿದೆ. 20 ಬಾರಿಯೂ ಅಪಘಾತಕ್ಕೀಡಾಗಿದೆ. 21ನೇ ಬಾರಿಯೂ ದಿಯೋಘಡ್ ವಿಮಾನ ನಿಲ್ದಾಣದಲ್ಲಿ ಪತನಗೊಳ್ಳಲಿದೆ’ಎಂದು ವ್ಯಂಗ್ಯ ಮಾಡಿದ್ದಾರೆ.

‘ವಕ್ಫ್ ಮಂಡಳಿಗೆ ಭೂಮಿ ಕಬಳಿಸುವ ಅಭ್ಯಾಸವಿದೆ.ಕರ್ನಾಟಕದಲ್ಲಿ ಇಡೀ ಗ್ರಾಮಗಳ ಆಸ್ತಿ ಕಬಳಿಸಿದ್ದು, 500 ವರ್ಷಗಳಷ್ಟು ಹಳೆಯದಾದ ದೇವಸ್ಥಾನಗಳ ಭೂಮಿ ಕಬಳಿಸಲಾಗಿದೆ. ಕೃಷಿ ಭೂಮಿಯನ್ನೂ ಕಬಳಿಸಿದ್ದಾರೆ. ವಕ್ಫ್ ಮಂಡಳಿಯಲ್ಲಿ ಬದಲಾವಣೆ ಬೇಕೋ ಬೇಡವೋ ಹೇಳಿ. ಹೇಮಂತ್ ಬಾಬು(ಹೇಮಂತ್ ಸೊರೇನ್) ಮತ್ತು ರಾಹುಲ್ ಗಾಂಧಿ ವಿರೋಧಿಸಲಿ. ಬಿಜೆಪಿ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸುತ್ತದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ಎಂದಿದ್ದಾರೆ.

ಆಡಳಿತಾರೂಢ ಜೆಎಂಎಂ ನೇತೃತ್ವದ ಒಕ್ಕೂಟವು ಒಳನುಸುಳುಕೋರರನ್ನು ತನ್ನ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿದೆ ಎಂದು ಶಾ ಆರೋಪಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಕ್ರಮ ವಲಸೆಯನ್ನು ಪರಿಶೀಲಿಸುವುದಾಗಿ ಘೋಷಿಸಿದರು.

‘ಜಾರ್ಖಂಡ್ನಿಂದ ನಾವು ನಕ್ಸಲಿಸಂ ಮತ್ತು ಒಳನುಸುಳುವಿಕೆಯನ್ನು ತಡೆಗಟ್ಟುತ್ತೇವೆ’ ಎಂದ ಅವರು, ಪ್ರತಿಯೊಬ್ಬ ನುಸುಳುಕೋರನನ್ನು ಗಡಿಪಾರು ಮಾಡುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.