ವಾರಾಣಸಿ: ಪ್ರವಾಸೋದ್ಯಮ ಮತ್ತು ಆತಿಥ್ಯ ಸೇವೆ ಒದಗಿಸುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಸದರ್ನ್ ಟ್ರಾವೆಲ್ಸ್, ವಾರಾಣಸಿಯ ಪ್ರತಿಷ್ಠಿತ ಕಾಶಿ ವಿಶ್ವನಾಥ ಕಾರಿಡಾರ್ನಲ್ಲಿ ‘ಸದರ್ನ್ ಗ್ರ್ಯಾಂಡ್ ಕಾಶಿ’ ಅತಿಥಿ ಗೃಹ ಆರಂಭಿಸುವುದರೊಂದಿಗೆ ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಉದ್ಘಾಟನೆ ಮಾಡಿದ ಕಾಶಿ ವಿಶ್ವನಾಥ ಕಾರಿಡಾರ್ನಲ್ಲಿ ಭೀಮಾಶಂಕರ್ ಅತಿಥಿ ಗೃಹದ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಕಂಪನಿಗೆ ವಹಿಸಲಾಯಿತು.

ಗಣ್ಯರ ಉಪಸ್ಥಿತಿಯಲ್ಲಿ ಮಂಗಳವಾರ ಅತಿಥಿ ಗೃಹವನ್ನು ಸದರ್ನ್ ಟ್ರಾವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಮೋಹನ್, ಜಂಟಿ ವ್ಯವಸ್ಥಾಪಕ ನಿರ್ದೇಶಕ ಎ.ವಿ.ಪ್ರವೀಣ್ ಉದ್ಘಾಟಿಸಿದರು. ಹೊಸ ಹೋಟೆಲ್ನೊಂದಿಗೆ, ಸದರ್ನ್ ಟ್ರಾವೆಲ್ಸ್ ಪ್ರತಿ ವರ್ಷ ಲಕ್ಷಾಂತರ ಪ್ರಯಾಣಿಕರಿಗೆ ವಸತಿ ಸೌಕರ್ಯ ಒದಗಿಸಲಿದೆ.

‘ಹೊಸ ಹೋಟೆಲ್ನಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದರೊಂದಿಗೆ ಆತಿಥ್ಯ ಕ್ಷೇತ್ರದಲ್ಲಿ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಿದಂತಾಗಿದೆ’ ಎಂದು ಸದರ್ನ್ ಟ್ರಾವೆಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಆಲಪತಿ ಕೃಷ್ಣ ಮೋಹನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.