ವಿಶಾಖಪಟ್ಟಣಂ (ಪಿಟಿಐ): ನೌಕಾಪಡೆ ದಿನ ಅಂಗವಾಗಿ ಭಾನುವಾರ ಭಾರತೀಯ ನೌಕಾಪಡೆಯು ತನ್ನ ಕಾರ್ಯಾಚರಣೆ ಪ್ರಾತ್ಯಕ್ಷಿಕೆ ಮೂಲಕ ಪ್ರಬಲ ಯುದ್ಧ ಸಾಮರ್ಥ್ಯ ಪ್ರದರ್ಶಿಸಿತು.

ರಾಮಕೃಷ್ಣ ಬೀಚ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮತ್ತು ಸಶಸ್ತ್ರ ಪಡೆಗಳ ಮುಖಸ್ಥರೂ ಆದ ದ್ರೌಪದಿ ಮುರ್ಮು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಮೊದಲ ಬಾರಿಗೆ ನೌಕಾಪಡೆ ದಿನವನ್ನು ನವದೆಹಲಿಯ ಹೊರಗೆ ಆಚರಿಸಲಾಯಿತು.ಜಲಾಂತರ್ಗಾಮಿ ನೌಕೆ ಐಎನ್ಎಸ್ ಸಿಂಧುಕೀರ್ತಿ ಮತ್ತು ಐಎನ್ಎಸ್ ತರಂಗಿಣಿ ನಾವಿಕರುರಾಷ್ಟ್ರಪತಿ ಅವರನ್ನು ಸ್ವಾಗತಿಸಿದರು.

ನೌಕಾಪಡೆ ಕಮಾಂಡೋಗಳು ಸೀ ಕಿಂಗ್ ಹೆಲಿಕಾಪ್ಟರ್ನಿಂದ ಸಾಹಸ ಪ್ರದರ್ಶಿಸಿದರು. ನಂತರ ಮಾರ್ಕೋಸ್ (ಮರೈನ್ ಕಮಾಂಡೋಗಳು) ಅವರ ಯುದ್ಧ ಕೌಶಲ ಪ್ರಾತ್ಯಕ್ಷಿಕೆ ನಡೆಸಿದರು. ರಕ್ಷಣಾ ಕಾರ್ಯಾಚರಣೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.

ಹಾಕ್ ವಿಮಾನ ಮತ್ತು ಮಿಗ್ 29 ಕೆ ವಿಮಾನವೂ ಪ್ರದರ್ಶನದಲ್ಲಿತ್ತು.

ನೌಕಾಪಡೆ ಯುದ್ಧನೌಕೆಗಳಾದ ಕಾರ್ವೆಟ್ ಐಎನ್ಎಸ್ ಖಂಜರ್, ಐಎನ್ಎಸ್ ಕಡ್ಮತ್ ಮತ್ತು ಐಎನ್ಎಸ್ ಕಿರ್ಚ್, ಐಎನ್ಎಸ್ ದೆಹಲಿ, ಯುದ್ಧನೌಕೆ ಐಎನ್ಎಸ್ ಸಹ್ಯಾದ್ರಿ ಮತ್ತು ಐಎನ್ಎಸ್ ಕೊಚ್ಚಿಯನ್ನು ಪ್ರದರ್ಶಿಸಲಾಯಿತು.

ಯುದ್ಧನೌಕೆಗಳಿಂದ ರಾಕೆಟ್ ಗಳನ್ನು ಹಾರಿಸುವುದು ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.