ನವದೆಹಲಿ: ವಾರಣಾಸಿ-ದೆಹಲಿ ಮಾರ್ಗದಲ್ಲಿ ಚಲಿಸುತ್ತಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿದ್ದ ಪ್ರಯಾಣಿಕನೋರ್ವ ತುರ್ತು ದ್ವಾರ ತೆರೆಯಲು ಯತ್ನಿಸಿದ್ದಾನೆ. ಆದರೆ ಆತನನ್ನು ವಿಮಾನದ ಸಿಬ್ಬಂದಿ ಮತ್ತು ಸಹಪ್ರಯಾಣಿಕರು ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆ ನೀಡಿದೆ.

ಮಾರ್ಗಮಧ್ಯೆ ಗಲಾಟೆ ಸೃಷ್ಟಿಸಿದ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಶನಿವಾರ ದೆಹಲಿ-ವಾರಣಾಸಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಸ್ಪೈಸ್‌ಜೆಟ್ SG-2003 ವಿಮಾನದಲ್ಲಿದ್ದ ಪ್ರಯಾಣಿಕ ಸಿಬ್ಬಂದಿ ಜತೆ ವಾಗ್ವಾದ ನಡೆಸಿ, ತುರ್ತುದ್ವಾರ ತೆರೆಯಲು ಯತ್ನಿಸಿದ್ದಾನೆ.

ಕೂಡಲೇ ಸಿಬ್ಬಂದಿ, ಇತರ ಪ್ರಯಾಣಿಕರ ನೆರವಿನಿಂದ ಆತನನ್ನು ನಿಯಂತ್ರಿಸಿದ್ದಾರೆ ಎಂದು ಸ್ಪೈಸ್‌ಜೆಟ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಳಿಕ ಕ್ಯಾಪ್ಟನ್ ಎಟಿಸಿ ಸಂಪರ್ಕಿಸಿ ಲ್ಯಾಂಡಿಂಗ್ ಅನುಮತಿ ಕೇಳಿದ್ದಾರೆ. ವಿಮಾನ ವಾರಣಾಸಿಯಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಸಿಐಎಸ್‌ಎಫ್ ಮತ್ತು ಸ್ಪೈಸ್‌ಜೆಟ್ ಭದ್ರತಾ ಸಿಬ್ಬಂದಿ ಆ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.