ಮಲಪ್ಪುರಂ: ದುಬೈನಿಂದ ಮರಳಿದ್ದ ಮಲಪ್ಪುರಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ‘ಎಂಪಾಕ್ಸ್’ ಸೋಂಕಿನ ಲಕ್ಷಣಗಳು ಕಂಡುಬಂದಿವೆ.

ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, ‘ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ’ ಎಂದರು. ಕಳೆದ ವಾರ ಹರಿಯಾಣದ ವ್ಯಕ್ತಿಯೊಬ್ಬರಲ್ಲಿ ಎಂಪಾಕ್ಸ್ ಕಾಣಿಸಿಕೊಂಡಿತ್ತು.

‘ಕೆಲವು ದಿನಗಳ ಹಿಂದೆ ವ್ಯಕ್ತಿಯು ದುಬೈನಿಂದ ಬಂದಿದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ ಬಳಿಕ, ಎಂಪಾಕ್ಸ್ ಲಕ್ಷಣಗಳಿರಬಹುದು ಎಂದು ವ್ಯಕ್ತಿಯನ್ನು ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು’ ಎಂದು ಮಲ್ಲಪುರಂನ ಜಿಲ್ಲಾ ಆರೋಗ್ಯ ಅಧಿಕಾರಿ ವಿವರಿಸಿದರು.
.ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ.ಮಂಕಿಪಾಕ್ಸ್ ಒಬ್ಬರಿಗೆ ದೃಢ, ಸಾರ್ವಜನಿಕರಿಗೆ ತಕ್ಷಣದ ಅಪಾಯವಿಲ್ಲ: ಕೇಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.