ಬೋಲ್ಪುರ (ಪಶ್ಚಿಮ ಬಂಗಾಳ): ‘ಬಿಜೆಪಿ ಹೊರಗಿನವರ ಪಕ್ಷ’ ಎಂಬ ಟೀಕೆಯನ್ನು ಪುನರುಚ್ಚರಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠ್ಯಾಗೋರ್ ಅವರ ಈ ಭೂಮಿ ಎಂದಿಗೂ ಜಾತ್ಯತೀತತೆಯ ಮೇಲೆ ದ್ವೇಷದ ರಾಜಕಾರಣ ಸವಾರಿ ಮಾಡಲು ಬಿಡುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ವಿಶ್ವಭಾರತಿ ಕುಲಪತಿ ಬಿದ್ಯುತ್ ಚಕ್ರವರ್ತಿ ಅವರು ‘ಬಿಜೆಪಿ ವ್ಯಕ್ತಿ’. ಕ್ಯಾಂಪಸ್ನಲ್ಲಿ ಕೋಮುವಾದಿ ರಾಜಕಾರಣ ಬೆಳೆಸುವ ಮೂಲಕ ಸಂಸ್ಥೆಯ ಶ್ರೀಮಂತ ಪರಂಪರೆಗೆ ಚ್ಯುತಿತರುತ್ತಿದ್ದಾರೆ’ ಎಂದು ಟೀಕಿಸಿದರು.

ಮಹಾತ್ಮಗಾಂಧಿ ಮತ್ತು ದೇಶದ ಇತರ ಮಹನೀಯರನ್ನು ಗೌರವಿಸದವರು ಈಗ ‘ಚಿನ್ನದ ಬಂಗಾಳ’ವನ್ನು ಸೃಷ್ಟಿಸುವ ಮಾತು ಆಡುತ್ತಿದ್ದಾರೆ. ರವೀಂದ್ರನಾಥ ಠ್ಯಾಗೋರ್ ಅವರು ಈಗಾಗಲೇ ಹಲವು ದಶಕಗಳ ಹಿಂದೆಯೇ ಚಿನ್ನದ ಬಂಗಾಳವನ್ನು ಸೃಷ್ಟಿಸಿದ್ದಾರೆ. ಸದ್ಯ, ಕೋಮುವಾದಿ ಪಡೆಗಳಿಂದ ಅದನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದರು.

ಟಿಎಂಸಿ ಶಾಸಕರ ಇತ್ತೀಚಿನ ಪಕ್ಷಾಂತರ ಪ್ರಕರಣವನ್ನು ಉಲ್ಲೇಖಿಸಿದ ಅವರು, ಬಿಜೆಪಿ ಕೆಲ ಶಾಸಕರನ್ನು ಖರೀದಿ ಮಾಡಿರಬಹುದು. ಎಂದಿಗೂ ಪಕ್ಷವನ್ನು ಖರೀದಿ ಮಾಡಲಾಗದು ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.