ಚೆನ್ನೈ: ಕಮಲಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (ಎಂಎನ್ಎಂ) ಪಕ್ಷದ ಖಜಾಂಚಿ ಎ. ಚಂದ್ರಶೇಖರನ್ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ₹11.50 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಸುಮಾರು ₹80 ಕೋಟಿ ಲೆಕ್ಕಪತ್ರವಿಲ್ಲದ ಆದಾಯದ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ.

ತಿರುಪ್ಪೂರ್ನ ಉದ್ಯಮಿ ಚಂದ್ರಶೇಖರ್ ಅವರಿಗೆ ಸೇರಿದ ತಿರುಪ್ಪೂರ್, ಧರ್ಮಪುರ, ಚೆನ್ನೈ ಮತ್ತು ಇತರ ಐದು ಸ್ಥಳಗಳಲ್ಲಿ ಗುರುವಾರ ಶೋಧ ನಡೆಸಲಾಗಿದೆ. ಚಂದ್ರಶೇಖರನ್ ಅವರ ಕಂಪೆನಿಯು ಖರೀದಿ ಮತ್ತು ವೆಚ್ಚಗಳನ್ನು ಉತ್ಪ್ರೇಕ್ಷಿಸಿ ಲಾಭದ ಮೊತ್ತವನ್ನು ಕಡಿಮೆ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲಾಖೆಯ ಶೋಧ ಕ್ರಮವು ಕಮಲಹಾಸನ್ ಅವರನ್ನು ಕೆರಳಿಸಿದೆ. ಇದು ತಮ್ಮನ್ನು ಬೆದರಿಸುವ ತಂತ್ರ, ತಮ್ಮದು ಪ್ರಾಮಾಣಿಕವಾದ ಪಕ್ಷ ಎಂದು ಅವರು ಹೇಳಿದ್ದಾರೆ.

ಕಾನೂನು ಜಾರಿ ಅಧಿಕಾರಿಗಳು ತಮಿಳುನಾಡಿನಲ್ಲಿ ಭಾರಿ ಪ್ರಮಾಣದ ನಗದು ಮತ್ತು ಇತರ ವಸ್ತುಗಳನ್ನು ಈವರೆಗೆ ವಶಪಡಿಸಿಕೊಂಡಿದ್ದಾರೆ. ಫೆ. 26ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ₹127 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.