ಮುಂಬೈ: ರೇಡಾರ್ಗಳ ಕಣ್ತಪ್ಪಿಸಿ ಸಂಚರಿಸುವ ಸಾಮರ್ಥ್ಯದ, ಭಾರತೀಯ ನೌಕಾಪಡೆಯ ಪ್ರಾಜೆಕ್ಟ್–17 ಯೋಜನೆಯ ಮೂರನೇ ನೌಕೆ ‘ತಾರಾಗಿರಿ’ ಭಾನುವಾರ ಅರಬ್ಬಿ ಸಮುದ್ರಕ್ಕೆ ಇಳಿಯಿತು. ‘ನೀಲಗಿರಿ ಶ್ರೇಣಿ’ಯ ನೌಕೆಗಳಲ್ಲಿ ಈ ನೌಕೆ ಮೂರನೆಯದ್ದಾಗಿದ್ದು, ಇದು ರಕ್ಷಣಾ ಸ್ವಾವಲಂಬನೆಯಲ್ಲಿ ಭಾರತದ ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.

ಮುಂಬೈನ ಮಡಗಾಂವ್ ಡಾಕ್ ಶಿಪ್ಬಿಲ್ಡರ್ಸ್ (ಎಂಡಿಎಲ್) ಸಂಸ್ಥೆಯು ಈ ಸರಣಿಯ ನೌಕೆಗಳನ್ನು ನಿರ್ಮಿಸುತ್ತಿದೆ. ಯೋಜನೆಯ ಮೊದಲ ನೌಕೆ ‘ನೀಲಗಿರಿ’ 2019ರ ಸೆ. 28ರಂದು ಉದ್ಘಾಟನೆಗೊಂಡಿತ್ತು. 2024ರ ಆರಂಭದಲ್ಲಿ ಸಮುದ್ರದಲ್ಲಿ ಇದರ ಪರೀಕ್ಷೆ ಆರಂಭಗೊಳ್ಳುವ ನಿರೀಕ್ಷೆಯಿದೆ. ಎರಡನೇ ನೌಕೆ ‘ಉದಯಗಿರಿ’ 2022ರ ಮೇ 17ರಂದು ಉದ್ಘಾಟನೆಗೊಂಡಿತ್ತು. ಇದು 2024ರ ಕೊನೆಯ ಹೊತ್ತಿಗೆ ಪರೀಕ್ಷೆಗೆ ಒಳಪಡಲಿದೆ. ಭಾನುವಾರ ಉದ್ಘಾಟನೆಗೊಂಡ ತಾರಾಗಿರಿ ನೌಕೆಯನ್ನು 2025ರಲ್ಲಿ ನೌಕಾಪಡೆಗೆ ಹಸ್ತಾಂತರಿಸುವ ಸಾಧ್ಯತೆಯಿದೆ.

ನೌಕೆಯ ಭಾಗಗಳನ್ನು ಪ್ರತ್ಯೇಕವಾಗಿ ತಯಾರಿಸಿ, ನಂತರ ಅವುಗಳನ್ನು ಒಟ್ಟುಗೂಡಿಸಿ ನೌಕೆ ನಿರ್ಮಾಣ ಮಾಡುವ ತಂತ್ರಜ್ಞಾನವನ್ನು (ಹಲ್ ಬ್ಲಾಕ್) ಇಲ್ಲಿ ಅನುಸರಿಸಲಾಗಿದೆ. ಭಾರತೀಯ ನೌಕಾಪಡೆಯ ‘ಬ್ಯೂರೊ ಆಫ್ ನೇವಲ್ ಡಿಸೈನ್’ ಘಟಕವು ತಾರಾಗಿರಿ ನೌಕೆಯನ್ನು ವಿನ್ಯಾಸ ಮಾಡಿದ್ದು, ಎಂಡಿಎಲ್ ಸಂಸ್ಥೆಯು ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಎರಡು ಗ್ಯಾಸ್ ಟರ್ಬೈನ್ಗಳು, 2 ಮುಖ್ಯ ಡೀಸೆಲ್
ಎಂಜಿನ್ಗಳ ಸಹಾಯದಿಂದ ನೌಕೆ ಸಂಚರಿಸುತ್ತದೆ. ಇದರ ನಿರ್ಮಾಣಕ್ಕೆ ಬಳಸಿರುವ ಉಕ್ಕನ್ನು ಸರ್ಕಾರಿ ಸ್ವಾಮ್ಯದ ಸೈಲ್ ಸಂಸ್ಥೆ ಪೂರೈಸಿದೆ.

ದೇಶೀಯವಾಗಿ ತಯಾರಿಸಲಾದ ಶಸ್ತ್ರಾಸ್ತ್ರ, ಸೆನ್ಸರ್ಗಳು, ಅತ್ಯಾಧುನಿಕ ಮಾಹಿತಿ ವ್ಯವಸ್ಥೆ ಮೊದಲಾದ ಸೌಲಭ್ಯಗಳನ್ನು ನೌಕೆಯಲ್ಲಿ ಅಳವಡಿಸಲಾಗಿದೆ. ಮೇಲ್ಮೈನಿಂದ ಮೇಲ್ಮೈಗೆ ಉಡ್ಡಯನ ಮಾಡಬಲ್ಲ ಸಾಮರ್ಥ್ಯದ ಸೂಪರ್ಸಾನಿಕ್ ಕ್ಷಿಪಣಿಯನ್ನು ಇದರಲ್ಲಿ ಅಳವಡಿಸಲಾಗುತ್ತದೆ. ಶತ್ರು ಯುದ್ಧವಿಮಾನಗಳು ಹಾಗೂ ಕ್ರೂಸ್ ಕ್ಷಿಪಣಿಗಳ ಬೆದರಿಕೆಯನ್ನು ಸಮರ್ಥವಾಗಿ ಎದುರಿಸುವ ವಾಯುರಕ್ಷಣಾ ಸಾಮರ್ಥ್ಯವನ್ನೂ ಈ ನೌಕೆ ಹೊಂದಿದೆ.

ಅಂಕಿ–ಅಂಶಗಳು

₹25,700 ಕೋಟಿ – ನೀಲಗಿರಿ ಶ್ರೇಣಿಯನಾಲ್ಕು ನೌಕೆಗಳ ನಿರ್ಮಾಣ ವೆಚ್ಚ

3,510 ಟನ್ – ತಾರಾಗಿರಿ ನೌಕೆಯ ಅಂದಾಜು ತೂಕ

149.02 ಮೀ. – ನೌಕೆಯ ಉದ್ದ

17.8 ಮೀ. – ನೌಕೆಯ ಅಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.