ಮುಂಬೈ:‘ಶಿಕ್ಷಕರು ಮಕ್ಕಳಿಗೆ ಪಂಚತಂತ್ರ ಕಥೆಗಳನ್ನು ಹೇಳಿಕೊಡಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಅವರು ಮುಂಬೈನ ಪೋವಾಯಿಯ ಎಎಂ ನಾಯಿಕ್ ಶಾಲೆ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ನಮ್ಮ ಪ್ರಾಚೀನ ಭಾರತದ ಪಂಚತಂತ್ರ ಕಥೆಗಳು ಮಕ್ಕಳಿಗೆ ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು? ಎಂಬುದನ್ನು ಅತ್ಯಂತ ಸೊಗಸಾಗಿ ಬೋಧಿಸುತ್ತವೆ. ಇದರಿಂದ ಮಕ್ಕಳು ನೀತಿವಂತರಾಗುತ್ತಾರೆ’ ಎಂದು ಶಾ ಹೇಳಿದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಕೇವಲ ಉದ್ಯೋಗ ನೀಡುವ ಶಿಕ್ಷಣ ನೀಡುವುದಿಲ್ಲ. ಮಕ್ಕಳನ್ನು ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ಮಾಜಿ ರಾಷ್ಟ್ರಪತಿ ಎಸ್ ರಾಧಾಕೃಷ್ಣನ್ ಅವರು ವಿಚಾರಧಾರೆಗಳನ್ನು ಎನ್‌ಇಪಿ ಒಳಗೊಂಡಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಭಾಗವಹಿಸಿದ್ದರು. ‘ಮಹಾರಾಷ್ಟ್ರದಲ್ಲಿಫಡಣವೀಸ್ ಆಡಳಿತ ಸುವರ್ಣಯುಗ’ ಎಂದು ಶಾ ಕೊಂಡಾಡಿದರು.

Video Story: ಬೆಂಗಳೂರು ಮಹಾನಗರ ಮಳೆಗೆ ತತ್ತರ– ರೋಡಿಗಿಳಿದ ದೋಣಿಗಳು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.