ಹೈದರಾಬಾದ್: ಮತಗಟ್ಟೆ ಸಮೀಕ್ಷೆಗಳ ‘ಭವಿಷ್ಯ’ ನಿಜವಾಗಿದ್ದು, ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಹೆಚ್‌ಆರ್‌ಎಸ್) ಆಘಾತ ಅನುಭವಿಸಿದ್ದರೆ ಕಾಂಗ್ರೆಸ್ ಅದ್ಭುತ ಗೆಲುವು ದಾಖಲಿಸಿದೆ. ಇಲ್ಲಿ ಕಾಂಗ್ರೆಸ್ INC 64 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿದೆ. ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಓವೈಸಿ ನೇತೃತ್ವದ ಎಐಎಂಐಎಂ 7ರಲ್ಲಿ ಗೆದ್ದಿದೆ. ಸಿಪಿಐ 1. ಒಟ್ಟು ಸ್ಥಾನ 119, ಬಹುಮತಕ್ಕೆ 60.

2018ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ 88ರಲ್ಲಿ ಬಿಆರ್‌ಎಸ್ ಗೆಲುವು ಕಂಡಿತ್ತು (ಶೇ 46.87ರಷ್ಟು ಮತ ಪಡೆಯಿತು). ಕಾಂಗ್ರೆಸ್ ಪಕ್ಷವು 19 ಸ್ಥಾನಗಳೊಂದಿಗೆ (ಶೇ 28.43ರಷ್ಟು ಮತ) ಎರಡನೆಯ ಸ್ಥಾನ ಪಡೆದಿತ್ತು. ಎಐಎಂಐಎಂ ಪಕ್ಷ 7 ಸ್ಥಾನ (ಶೇ 2.71ರಷ್ಟು ಮತ), ಬಿಜೆಪಿ 1 ಸ್ಥಾನ (ಶೇ 6.98ರಷ್ಟು ಮತ) ಪಡೆದಿದ್ದವು. ಇತರರು 4 ಸ್ಥಾನ (ಶೇ 15.01ರಷ್ಟು ಮತ) ಪಡೆದಿದ್ದರು. ಈ ಚುನಾವಣೆಯಲ್ಲಿ ಒಟ್ಟಾರೆ ಶೇ 73.7ರಷ್ಟು ಮತದಾನ ನಡೆದಿತ್ತು. ತೆಲಂಗಾಣ ವಿಧಾನಸಭೆಯ ಮ್ಯಾಜಿಕ್ ನಂಬರ್ 60.

ಕಣದಲ್ಲಿದ್ದ ಪ್ರಮುಖ ನಾಯಕರು: ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ನಾಯಕ ಕೆ.ಚಂದ್ರಶೇಖರ್ ರಾವ್, ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ, ಕೆಸಿಆರ್ ಪುತ್ರ ಕೆ.ಟಿ.ರಾಮ ರಾವ್, ಕಾಂಗ್ರೆಸ್‌ನಿಂದ ಎ. ರೇವಂತ್ ರೆಡ್ಡಿ ಹಾಗೂ ಬಿಜೆಪಿಯಿಂದ ಬಂಡಿ ಸಂಜಯ್‌ಕುಮಾರ್ ಅವರು ಕಣಕ್ಕಿಳಿದಿದ್ದರು.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು.

ತೆಲಂಗಾಣ ಮುಖ್ಯಮಂತ್ರಿ ಸ್ಥಾನಕ್ಕೆ ಕೆ.ಚಂದ್ರಶೇಖರ್ ರಾವ್ ರಾಜೀನಾಮೆ ಸಲ್ಲಿಸಿದ್ದಾರೆ.

ರೇವಂತ್ ರೆಡ್ಡಿ ಅವರು ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ.

ತೆಲಂಗಾಣದಲ್ಲಿ ಈ ಬಾರಿ ಮೂವರು ಕಾಂಗ್ರೆಸ್ ಸಂಸದರು ಗೆಲುವು ಸಾಧಿಸಿದ್ದಾರೆ. ಇತ್ತ ಬಿಜೆಪಿಯ ಮೂವರು ಸಂಸದರು ಸೋಲು ಕಂಡಿದ್ದಾರೆ.

ನಾಗಾರ್ಜುನ ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಂದೂರು ಜಯವೀರ್ 55 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ನಾಳೆ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ

ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ 7 ಕೇತ್ರಗಳಲ್ಲಿ ಮುನ್ನಡೆ

.Election Results: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ- ಪ್ರಧಾನಿ ಮೋದಿ ಭಾಷಣ.Election Results 2023: ಮ.ಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ಬಿಜೆಪಿ, ತೆಲಂಗಾಣದಲ್ಲಿ 'ಕೈ'.Election Result 2023 Quick Guide: ಫಲಿತಾಂಶ ಪೂರ್ಣ ಚಿತ್ರಣ ಇಲ್ಲಿದೆ.Rajasthan Results 2023: BJP-Congress ನಡುವೆ 25 ವರ್ಷಗಳಿಂದ ಅಧಿಕಾರ ಬದಲಾವಣೆ.ಚುನಾವಣಾ ಫಲಿತಾಂಶ ಬ್ಲಾಕ್ಬಸ್ಟರ್ ಸಿನಿಮಾ, ಕ್ರೀಡೆಗಿಂತಲೂ ರೋಚಕ: ಆನಂದ್ ಮಹೀಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.