ಹೈದರಾಬಾದ್: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ಕಾರ್ಯಾಚರಣೆಯ ಹಿಂದಿರುವ ವ್ಯಕ್ತಿ ಕನ್ನಡಿಗರಾದಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ.

ಇದನ್ನೂ ಓದಿ:ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್

ಕರ್ನಾಟಕದ ಹುಬ್ಬಳ್ಳಿಯವರಾದವಿಶ್ವನಾಥ್ ಅವರು ಈ ಹಿಂದೆ ಅಖಂಡ ಆಂಧ್ರಪ್ರದೇಶದವಾರಂಗಲ್‌ನಲ್ಲಿ ನಡೆದ ಆ್ಯಸಿಡ್ ದಾಳಿಯ ಆರೋಪಿಗಳನ್ನುಎನ್‌ಕೌಂಟರ್ ಮಾಡಿದ್ದರು.

ಈ ಭೀಕರ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿರುವುದಕ್ಕೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಶ್ವನಾಥ್ ಅವರ ತಂದೆಯ ಊರುಗದಗ ಜಿಲ್ಲೆಯ ರೋಣತಾಲ್ಲೂಕಿನ ಅಸೂಟಿ. ವಿಶ್ವನಾಥ್ ಅವರು ಹುಟ್ಟು ಬೆಳದಿದ್ದುಹುಬ್ಬಳ್ಳಿಯಲ್ಲಿ. ಸದ್ಯ ಅವರ ಕುಟುಂಬದವರು ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿ ನೆಲೆಸಿದ್ದಾರೆ. ವಿಶ್ವಾನಾಥ್ ಅವರು ಜೆಜಿ ಕಾಲೇಜಿನಲ್ಲಿ ಬಿ.ಕಾಂ ಪೂರ್ಣಗೊಳಿಸಿದ್ದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಇದನ್ನೂ ಓದಿ:ಪಶು ವೈದ್ಯೆ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ: ವ್ಯಾಪಕ ಆಕ್ರೋಶ

1996 ಐಪಿಎಸ್ ಬ್ಯಾಚ್‌ನವರಾದ ವಿಶ್ವನಾಥ್ ಆಂಧ್ರಪ್ರದೇಶ ಪೊಲೀಸ್ ಇಲಾಖೆಗೆ ನಿಯೋಜನೆಯಾದರು.8 ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.ಆಂಧ್ರ ನಕ್ಸಲ್ ನಿಗ್ರಹ ದಳದಲ್ಲಿನಕ್ಸಲರ ಶರಣಾಗತಿ ಮಾಡಿ, ಮುಖ್ಯವಾಹಿನಿ ತರುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.

ಅತ್ಯಾಚಾರ ಪ್ರಕರಣ ಆರೋಪಿಗಳಎನ್‌ಕೌಂಟರ್‌ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ‘ಅತ್ಯಾಚಾರ ಆರೋಪಿಗಳಿಗೆ ಸಾವಿನ ಶಿಕ್ಷೆಯೇ ಆಗಬೇಕು ಎಂದು ನಾವು ಯಾವಾಗಲೂ ಹೇಳುತ್ತಿರುತ್ತೇವೆ ಮತ್ತು ಅಲ್ಲಿನ ಪೊಲೀಸರು ಸಂತ್ರಸ್ತೆಗೆ ಸರಿಯಾದ ನ್ಯಾಯ ಒದಗಿಸಿದ್ದಾರೆ. ಎನ್‌ಕೌಂಟರ್ ಹೇಗಾಯಿತು ಎನ್ನುವ ಸಂಪೂರ್ಣ ಮಾಹಿತಿ ಇಲ್ಲ’ ಎಂದು ಹೇಳಿದ್ದಾರೆ.

ಇನ್ನಷ್ಟು ಓದು

ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ: ನಾಲ್ವರು ಆರೋಪಿಗಳ ಬಂಧನ

ಪಶು ವೈದ್ಯೆ ಅತ್ಯಾಚಾರ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮುಗಿಬಿದ್ದ ಟ್ವೀಟಿಗರು

ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಹಿಂದಿನ ಭೀಕರತೆ ತೆರೆದಿಟ್ಟ ಪೊಲೀಸ್ ದಾಖಲೆ

ಪಶುವೈದ್ಯೆ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು ಕೆಸಿಆರ್ ಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.