ನವದೆಹಲಿ: ತೆಲಂಗಾಣದ ವಾರಂಗಲ್ ಜಿಲ್ಲೆಯ ಪಾಲಂಪೇಟ್ ಗ್ರಾಮದಲ್ಲಿರುವ ರಾಮಪ್ಪ ದೇವಸ್ಥಾನಕ್ಕೆ ‘ಯುನೆಸ್ಕೊ ವಿಶ್ವ ಪಾರಂಪರಿಕ ತಾಣ’ಗೌರವ ನೀಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ಡಿ ಭಾನುವಾರ ತಿಳಿಸಿದ್ದಾರೆ.

ಈ ಕುರಿತು ಅವರು, ‘ಈ ವಿಷಯ ಹಂಚಿಕೊಳ್ಳಲು ಸಂತಸ ಎನಿಸುತ್ತದೆ. ಈ ನಿಟ್ಟಿನಲ್ಲಿ ಮಾರ್ಗದರ್ಶನ ಹಾಗೂ ಬೆಂಬಲ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಪರವಾಗಿ, ಅದರಲ್ಲೂ ತೆಲಂಗಾಣ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

13ನೇ ಶತಮಾನದ ಈ ದೇವಸ್ಥಾನ ತನ್ನ ವಾಸ್ತುಶಿಲ್ಪದಿಂದಾಗಿ ಗಮನ ಸೆಳೆಯುತ್ತದೆ. ಈ ದೇವಸ್ಥಾನವನ್ನು ನಿರ್ಮಿಸಿರುವ ಶಿಲ್ಪಿ ರಾಮಪ್ಪ ಅವರ ಹೆಸರನ್ನೇ ದೇಗುಲಕ್ಕೆ ಇಡಲಾಗಿದೆ.

‘ಕಾಕತೀಯ ರಾಜವಂಶದ ಕಲಾ ಶ್ರೀಮಂತಿಕೆಯನ್ನು ರಾಮಪ್ಪ ದೇವಸ್ಥಾನ ಬಿಂಬಿಸುತ್ತದೆ. ಈ ದೇವಸ್ಥಾನಕ್ಕೆ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣ ಗೌರವ ಲಭಿಸಿದ್ದಕ್ಕಾಗಿ ತೆಲಂಗಾಣ ರಾಜ್ಯದ ಜನರನ್ನು ಅಭಿನಂದಿಸುವೆ. ಪ್ರತಿಯೊಬ್ಬರೂ ಈ ದೇವಸ್ಥಾನಕ್ಕೆ ಭೇಟಿ ನೀಡಿ, ಅದರ ವೈಭವವನ್ನು ಕಣ್ತುಂಬಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಬಾರಿ ಕೇಂದ್ರ ಸರ್ಕಾರ ಈ ದೇವಸ್ಥಾನದ ಹೆಸರಿರುವ ಪ್ರಸ್ತಾವನೆಯನ್ನು ಮಾತ್ರ ವಿಶ್ವ ಪಾರಂಪರಿಕ ತಾಣ ಗೌರವಕ್ಕಾಗಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.