ನವದೆಹಲಿ: ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ದೇಶದಾದ್ಯಂತ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ನೀಡಿರುವ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸಿವೆ.

‘ಸರ್ಕಾರವು ಇಂತಹ ಸುತ್ತೋಲೆ ಹೊರಡಿಸುವ ಮೂಲಕ ಅಧಿಕಾರದ ದುರುಪಯೋಗ ಮಾಡಿದೆ. ಧಾರ್ಮಿಕ ನಂಬಿಕೆಯ ವಿಚಾರದಲ್ಲಿ ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳುವ ಹಕ್ಕು ನೌಕಕರಿಗೆ ಇದೆ. ಸರ್ಕಾರದ ಇಂತಹ ಕ್ರಮವು ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ನ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ’ ಎಂದು ಸಿಪಿಎಂ ಪಾಲಿಟ್ ಬ್ಯೂರೊ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಬಿಜೆಪಿ ಅಧಿಕಾರದಲ್ಲಿರುವ ರಾಜ್ಯವೊಂದು ಈದ್ ಮಿಲಾದ್ ದಿನದ ರಜೆಯನ್ನು ರದ್ದುಗೊಳಿಸಿದೆ. ಶುಕ್ರವಾರದ ನಮಾಜ್ಗೆ ಮೀಸಲಿಟ್ಟಿದ್ದ 30 ನಿಮಿಷಗಳ ವಿರಾಮದ ಅವಧಿಯನ್ನು ಸಾಂವಿಧಾನಿಕ ಹುದ್ದೆಯಲ್ಲಿರುವ ಒಬ್ಬರು ರದ್ದು ಮಾಡಿದ್ದಾರೆ. ಯಾರ ತುಷ್ಟೀಕರಣವೂ ಇಲ್ಲದೆ (ಬಹುಸಂಖ್ಯಾತರನ್ನು ಹೊರತುಪಡಿಸಿ) ಎಲ್ಲರ ಅಭಿವೃದ್ಧಿ ಎಂದರೆ ಇದೇನಾ?’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಲ್ಲೂ ಜ.22 ರಂದು ಅರ್ಧದಿನ/ ಪೂರ್ಣ ದಿನ ರಜೆ ಘೋಷಿಸಲಾಗಿದೆ. ಕೆಲವು ರಾಜ್ಯಗಳು ಮದ್ಯ ಮಾರಾಟವನ್ನೂ ನಿಷೇಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.