ತಿರುವನಂತಪುರ: ಇಲ್ಲಿನ ದೇವಾಲಯವೊಂದರಲ್ಲಿ ತುಲಾಭಾರ ಮಾಡುತ್ತಿದ್ದ ಸಂದರ್ಭದಲ್ಲಿ ತಕ್ಕಡಿಯ ಕೊಂಡಿ ಕಳಚಿ ತಲೆಗೆ ಬಿದ್ದ ಪರಿಣಾಮ ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಗಾಯಗೊಂಡಿದ್ದಾರೆ.

’ತರೂರ್ ಅವರ ತಲೆಯ ಗಾಯಕ್ಕೆ ಆರು ಹೊಲಿಗೆ ಹಾಕಲಾಗಿದೆ. ಅವರ ಕಾಲಿಗೂ ಗಾಯಗಳಾಗಿದ್ದು, ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ‘ ಎಂದು ಪಕ್ಷದ ಮೂಲಗಳು ತಿಳಿಸಿವೆ.

’ಸೋಮವಾರ ವಿಷು ಹಬ್ಬವಾದ ಕಾರಣ ಚುನಾವಣಾ ಪ್ರಚಾರಕ್ಕೆ ತೆರಳುವ ಮೊದಲು ಇಲ್ಲಿನ ದೇವಿ ಕ್ಷೇತ್ರದಲ್ಲಿ ತರೂರ್ ಅವರು ಸಕ್ಕರೆಯಿಂದ ತುಲಾಭಾರ ಮಾಡಿಸಿದ್ದರು.ಈ ವೇಳೆ ತಕ್ಕಡಿಯ ಕೊಂಡಿ ಕಳಚಿ ಬಿದ್ದಿದೆ‘ ಎಂದೂ ಹೇಳಿವೆ.

ತರೂರು ಅವರ ಸಂಬಂಧಿಕರು, ಶಾಸಕ ವಿ.ಎಸ್.ಶಿವಕುಮಾರ್ ಮತ್ತು ಕಾರ್ಯಕರ್ತರು ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.