ಪೋಖರಣ್(ರಾಜಸ್ಥಾನ): ಮರುಭೂಮಿಯಿಂದ ಕೂಡಿದ ಈ ಪ್ರದೇಶದ ಆಗಸವು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಪರೀಕ್ಷೆ–ಪ್ರದರ್ಶನದ ಅಂಗಳವೇ ಆಗಿತ್ತು. ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧವಿಮಾನ ರಫೇಲ್ನಿಂದ ವಿಶಾಲ ವ್ಯಾಪ್ತಿ ಸಾಮರ್ಥ್ಯದ ‘ಎಂಐಸಿಎ’ ಕ್ಷಿಪಣಿ ಚಿಮ್ಮಿದರೆ, ಮತ್ತೊಂದು ಯುದ್ಧವಿಮಾನ ‘ಅಪಾಚೆ’ಯಿಂದ ‘ಹೆಲ್ಫೈರ್’ ಕ್ಷಿಪಣಿಗಳು ಬಾನಂಗಳದಲ್ಲಿ ಶನಿವಾರ ಗರ್ಜಿಸಿದವು.

‘ವಾಯು ಶಕ್ತಿ 2024’ ಹೆಸರಿನ ತಾಲೀಮಿನ ಮೂಲಕ, ವಾಯುಪಡೆಯ ಮಾರಕ ಮತ್ತು ನಿಖರ ದಾಳಿ ಸಾಮರ್ಥ್ಯ ಅನಾವರಣಗೊಂಡಿತು.

ರಫೇಲ್ ಹಾಗೂ ಅಪಾಚೆ ಯುದ್ಧವಿಮಾನಗಳಿಂದ ಚಿಮ್ಮಿದ ಕ್ಷಿಪಣಿಗಳು ದೃಷ್ಟಿಗೆ ಗೋಚರವಾಗದಷ್ಟು ದೂರಕ್ಕೆ ಮಿಂಚಿನ ವೇಗದಲ್ಲಿ ಸಾಗಿ, ನಿರ್ದಿಷ್ಟ ಗುರಿಯನ್ನು ನಾಶಪಡಿಸುವ ಕ್ಷಮತೆ ಹೊಂದಿವೆ.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಈ ಸಮರಾಭ್ಯಾಸದಲ್ಲಿ 77 ಫೈಟರ್ಗಳು ಸೇರಿದಂತೆ 120 ಯುದ್ಧವಿಮಾನಗಳ ಶಕ್ತಿ ಪ್ರದರ್ಶನಕ್ಕೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹಾಗೂ ಇತರ ಸೇನಾಧಿಕಾರಿಗಳು ಸಾಕ್ಷಿಯಾದರು.

ಯುದ್ಧವಿಮಾನಗಳಾದ ರಫೇಲ್, ತೇಜಸ್, ಸು–30ಎಂಕೆಐ, ಮಿಗ್–29, ಜಾಗ್ವಾರ್ ಹಾಗೂ ಚಿನೂಕ್ ಹೆಲಿಕಾಪ್ಟರ್ಗಳಿಂದಲೂ ತಾಲೀಮು ನಡೆಯಿತು.

ಉಗ್ರರ ಅಡಗುತಾಣಗಳ ಮೇಲೆ ವಾಯುಪಡೆಯ ಗರುಡ ಕಮಾಂಡೋಗಳು ಕ್ಷಿಪ್ರವಾಗಿ ಎರಗಿ, ಅವರನ್ನು ಹೊಡೆದುರುಳಿಸುವ ಕಾರ್ಯಾಚರಣೆಯ ತಾಲೀಮು ಸಹ ನಡೆಯಿತು.

ಲಘು ಯುದ್ಧ ಹೆಲಕಾಪ್ಟರ್ ‘ಪ್ರಚಂಡ’ವನ್ನು ಬಳಸಿ ರಾತ್ರಿ ವೇಳೆ ನಡೆಸುವ ಕಾರ್ಯಾಚರಣೆಯನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಿದ್ದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.