ನವದೆಹಲಿ: ಎನ್‌ಜಿಒಗಳ ನೋಂದಣಿ ನವೀಕರಣ ಮಾಡುವುದಾಗಿ ಹೇಳಿ, ತನ್ನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ವಿಭಾಗದ ಹೆಸರಿನಲ್ಲಿ ಕೆಲವರು ವಂಚಿಸುತ್ತಿದ್ದು, ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಗೃಹ ಸಚಿವಾಲಯ ಶುಕ್ರವಾರ ಹೇಳಿದೆ.

ನಕಲಿ ಲಾಂಛನ, ಅಧಿಕಾರಿಗಳ ನಕಲಿ ಇ–ಮೇಲ್ ಐಡಿ ಬಳಸಿ, ಎಫ್‌ಸಿಆರ್‌ಎ ವಿಭಾಗದ ಅಧಿಕಾರಿಗಳ ಹೆಸರಿನಲ್ಲಿ ಖೊಟ್ಟಿ ಇ–ಮೇಲ್ ಸಂದೇಶಗಳನ್ನು ಕಳುಹಿಸಿ, ಹಣ ಕೇಳಲಾಗುತ್ತಿದೆ. ಇಂತಹ ವಂಚನೆಗಳ ಬಗ್ಗೆ ಎಚ್ಚರದಿಂದಿರುವಂತೆ ಸಚಿವಾಲಯ ತಿಳಿಸಿದೆ.

ವೈಯಕ್ತಿಕ ಮಾಹಿತಿ ಅಥವಾ ಹಣ ಪಾವತಿ ಕೋರಿಕೆಯ ಪತ್ರಗಳು/ಇ–ಮೇಲ್‌ಗಳಿಗೆ ಜನರು ಪ್ರತಿಕ್ರಿಯೆ ನೀಡಬಾರದು ಎಂದೂ ತಿಳಿಸಿದೆ.

ನೋಂದಣಿ, ನವೀಕರಣ, ಈಗಾಗಲೇ ನೀಡಿರುವ ಮಾಹಿತಿಯಲ್ಲಿ ಬದಲಾವಣೆಗೆ ಮತ್ತು ಪೂರ್ವಾನುಮತಿ ಸೇರಿದಂತೆ ಯಾವುದೇ ಸೇವೆಗಾಗಿ ಅಧಿಕೃತ ಪೋರ್ಟಲ್ http://www.fcraonline.nic.in/ ಸಂಪರ್ಕಿಸುವಂತೆ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.