ನವದೆಹಲಿ: ಪರೋಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಅಪರಾಧಿಯೊಬ್ಬರನ್ನು ಮೂರು ವರ್ಷಗಳ ಬಳಿಕ ದೆಹಲಿ ಪೊಲೀಸರು ಮತ್ತೆ ಬಂಧಿಸಿದ್ದಾರೆ.

‘ಅಪರಾಧಿ ರುಬಿ ಬೇಗಮ್ ಅವರನ್ನು ಅವರ ಪುತ್ರಿಯ ಮನೆಯಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬೇಗಮ್ ಮತ್ತು ಅವರ ಪತಿ 24 ವರ್ಷಗಳ ಹಿಂದೆ ತಮ್ಮ ಉದ್ಯೋಗದಾತನ ಮನೆಯಲ್ಲಿ ದರೋಡೆ ಮಾಡಿ, ಅವರನ್ನು ಹತ್ಯೆಗೈದಿದ್ದರು. ನ್ಯಾಯಾಲಯವು 2016ರಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. 2020ರಲ್ಲಿ 8 ವಾರಗಳ ಅವಧಿಗೆ ಪರೋಲ್ ಮೇಲೆ ಬಿಡುಗಡೆಯಾಗಿದ್ದ ಬೇಗಮ್ ಅಸ್ಸಾಂಗೆ ತೆರಳಿದ್ದರು. ಕೋವಿಡ್–19 ಪರಿಸ್ಥಿತಿಯಿಂದಾಗಿ ಅವರ ಪರೋಲ್ ಅವಧಿ ವಿಸ್ತರಣೆಯಾಗಿತ್ತು.

‘ಬೇಗಮ್ ಅವರಿಗೆ 2021ರ ಫೆಬ್ರುವರಿ 20ರಂದು ಶರಣಾಗುವಂತೆ ಸೂಚಿಸಲಾಗಿತ್ತು, ಆದರೆ, ಅವರು ತಲೆಮರೆಸಿಕೊಂಡಿದ್ದರು. ಭಾನುವಾರ ಅವರನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.