ನವದೆಹಲಿ: ‘ಡೀಪ್ಫೇಕ್’ ಒಡ್ಡಿರುವ ಸವಾಲನ್ನು ಎದುರಿಸಲು ಐ.ಟಿ (ಮಾಹಿತಿ ತಂತ್ರಜ್ಞಾನ) ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿದ್ದು, ಮುಂದಿನ ಏಳು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಹೇಳಿದರು.

‘ಡೀಪ್ಫೇಕ್ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ತಪ್ಪುಮಾಹಿತಿಗಳ ಪ್ರಸರಣ ಕುರಿತು ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಐ.ಟಿ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಸಾಮಾಜಿಕ ಮಾಧ್ಯಮಗಳಿಗೆ ಸೂಚನೆ ನೀಡಿತ್ತು. ತಾನು ನೀಡಿರುವ ಸಲಹೆಗಳನ್ನು ಪೂರ್ಣವಾಗಿ ಪಾಲಿಸದಿದ್ದರೆ ಕಠಿಣ ಐ.ಟಿ ನಿಯಮಗಳನ್ನು ಜಾರಿಗೊಳಿಸಲಾವುದು ಎಂದು ಸ್ಪಷ್ಟಪಡಿಸಿತ್ತು’ ಎಂದು ಅವರು ತಿಳಿಸಿದರು.

‘ಸರ್ಕಾರದ ಸಲಹೆಗಳಲ್ಲಿರುವ ಅಂಶಗಳನ್ನು ಇನ್ನು ಐ.ಟಿ ನಿಯಮಗಳಲ್ಲಿ ಸೇರಿಸಲಾಗುವುದು. ಮುಂದಿನ ಒಂದು ವಾರದಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸುವ ವಿಶ್ವಾಸ ನಮ್ಮದು’ ಎಂದರು.

‘ಪ್ರತಿಯೊಂದು ಹೊಸ ತಂತ್ರಜ್ಞಾನದಲ್ಲಿ ಸವಾಲುಗಳೂ ಇರುತ್ತವೆ. ಪ್ರತಿಯೊಬ್ಬ ಭಾರತೀಯನಿಗೂ ಇಂಟರ್ನೆಟ್ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ಸುರಕ್ಷತೆಯ ಭಾವ ಮೂಡುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ನಾವು ಕಾನೂನುಗಳನ್ನು ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.