ಚೆನ್ನೈ: ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಚೆನ್ನೈನಗರದಲ್ಲಿ ನೀರು ಸರಬರಾಜು ಮಾಡುವುದು ಪಾಲಿಕೆಗೆ ತೀವ್ರ ಕಷ್ಟಕರವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಟೋಕನ್ಗಳನ್ನು ವಿತರಿಸಿ ಗದ್ದಲ ತಪ್ಪಿಸಲು ಮುಂದಾಗಿದೆ.

ಕುಡಿಯುವ ನೀರಿಗಾಗಿ ಜನರು ಜಗಳ, ನೂಕು ನುಗ್ಗಲು, ಗಲಾಟೆಗಳನ್ನು ಮಾಡಿಕೊಂಡ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಚೆನ್ನೈ ಮಹಾ ನಗರದಲ್ಲಿ ಮೂರು ವರ್ಷಗಳಿಂದ ತೀವ್ರ ಬರ ಕಾಣಿಸಿಕೊಂಡಿದೆ. ಈ ಬಾರಿಯೂ ಮಳೆಯಾಗದ ಕಾರಣಚೆನ್ನೈನಗರದಲ್ಲಿ ಅಂತರ್ಜಲಮಟ್ಟ ತಳಮಟ್ಟ ತಲುಪಿದೆ.ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಜಲಮೂಲಗಳಲ್ಲಿ ನೀರಿಲ್ಲದೆ, ಸ್ಥಳೀಯ ಆಡಳಿತ ಕಂಗಾಲಾಗಿದೆ.

ಇದನ್ನೂ ಓದಿಚೆನ್ನೈನಲ್ಲಿ ನೀರಿನ ಸಮಸ್ಯೆ-ಮನೆಯಿಂದಲೇ ಊಟದ ಪ್ಲೇಟು ತನ್ನಿ-ಐಟಿ ಕಂಪನಿಗಳ ಸಲಹೆ

ಚೆನ್ನೈ ಮಹಾನಗರಕ್ಕೆ ಪ್ರತಿದಿನ 830 ಮಿಲಿಯನ್ ಲೀಟರ್ ನೀರಿನ ಅವಶ್ಯಕತೆ ಇದ್ದು, ಪ್ರತಿದಿನ ಸಮುದ್ರ ನೀರನ್ನು ಶದ್ದೀಕರಿಸುವುದು, ಕೆರೆಗಳು, ಕಟ್ಟೆಗಳಿಂದ ಸುಮಾರು 530 ಮಿಲಿಯನ್ ಲೀಟರ್ ನೀರನ್ನು ಒದಗಿಸಲಾಗುತ್ತಿದೆ. ಈ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇರುವ ಕಡಿಮೆ ನೀರನ್ನು ವಿತರಿಸಲೂ ಜನರಿಂದ ಸಾಕಷ್ಟು ಅಡ್ಡಿಯಾದ ಕಾರಣ ಟೋಕನ್ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನು ಮುಂದೆ ಟೋಕನ್ ಇದ್ದವರಿಗೆ ನೀರು, ಇಲ್ಲದಿದ್ದರೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.