ನವದೆಹಲಿ: ದೆಹಲಿ ಚುನಾವಣೆಯ ಸಂದರ್ಭದಲ್ಲಿ ವಿವಿಧ ಐದು ರಾಜಕೀಯ ಪಕ್ಷಗಳು ಸಂಗ್ರಹಿಸಿದ ನಿಧಿಯ ಒಟ್ಟು ಮೊತ್ತ ₹ 50 ಕೋಟಿ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯ ವರದಿ ತಿಳಿಸಿದೆ.

ಚುನಾವಣೆಗಾಗಿ ಒಟ್ಟು ₹ 34.22 ಕೋಟಿ ವ್ಯಯ ಮಾಡಲಾಗಿದೆ. ₹ 22 ಕೋಟಿ ಆನ್ನು ಮಾಧ್ಯಮಗಳಲ್ಲಿ ಜಾಹೀರಾತಿಗಾಗಿಯೇ ಬಳಸಲಾಗಿದೆ. ಪ್ರಚಾರ ಸಾಮಗ್ರಿಗಳಿಗಾಗಿ ₹ 8.05 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಂಸ್ಥೆಯ ಈ ಕುರಿತು ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಚುನಾವಣಾ ಹಕ್ಕುಗಳ ಸಮಿತಿಯಾಗಿರುವ ಎಡಿಆರ್, ಪಕ್ಷಗಳು ತಮ್ಮ ನಾಯಕರ ಪ್ರವಾಸ ವೆಚ್ಚವಾಗಿ ಶೇ 51.91 ರಷ್ಟನ್ನು ವ್ಯಯಿಸಿವೆ. ಪಕ್ಷಗಳ ಸ್ಟಾರ್ ಪ್ರಚಾರಕರ ಪ್ರಯಾಣ ವೆಚ್ಚವಾಗಿ ₹ 68,000 ಮತ್ತು ಇತರೆ ನಾಯಕರಿಗಾಗಿ ₹ 63 ಸಾವಿರ ವೆಚ್ಚ ಮಾಡಿದೆ ಎಂದು ತಿಳಿಸಿದೆ.

ಈ ಪೈಕಿ ಚುನಾವಣೆ ಮುಗಿದು 230 ದಿನಗಳೇ ಕಳೆದರೂ ಬಿಜೆಪಿ, ಎನ್ಸಿಪಿ, ಸಿಪಿಐ, ಜೆಡಿಯು, ಆರ್ಜೆಡಿ, ಆರ್ಎಲ್ಡಿ, ಎಸ್ಎಚ್ಎಸ್ ಪಕ್ಷಗಳು ವೆಚ್ಚದ ವಿವರ ಇನ್ನೂ ಸಾರ್ವಜನಿಕವಾಗಿ ವೆಬ್ಸೈಟ್ಗಳಲ್ಲಿ ಲಭ್ಯವಿಲ್ಲ. ಸಿಪಿಎಂ, ಬಿಎಸ್ಪಿ, ಎಎಪಿ, ಎಲ್ಜೆಪಿ, ಕಾಂಗ್ರೆಸ್ ವರದಿ ಸಲ್ಲಿಸಲು 79 ರಿಂದ 162 ದಿನಗಳಷ್ಟು ವಿಳಂಬ ಮಾಡಿವೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.