ಚಿತ್ರಕೂಟ, ಉತ್ತರ ಪ್ರದೇಶ: ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯ ಮುಖಕ್ಕೆ ಗುಂಡು ಹೊಡಿದಿರುವ ಘಟನೆಮೌ ಜಿಲ್ಲೆಯ ಟಿಕ್ರಾ ಎಂಬ ಗ್ರಾಮದಲ್ಲಿ ನಡೆದಿದೆ.

ಗುಂಡಿನ ಹೊಡೆತಕ್ಕೆ ಹೀನಾ (22) ಎಂಬುವವರದವಡೆ ಭಾಗಛಿದ್ರವಾಗಿದೆ. ಇದೀಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆ ನ.30ರಂದು ನಡೆದಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಗಳಾದ ಸುಧೀರ್ ಸಿಂಗ್ ಮತ್ತು ಪೂಲ್ ಸಿಂಗ್ ಅವರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಅಂಕಿತ್ ಮಿತ್ತಲ್ ಶುಕ್ರವಾರ ತಿಳಿಸಿದ್ದಾರೆ.

ಘಟನೆ ವಿವರ: ಕಾರ್ಯಕ್ರಮದಲ್ಲಿದ್ದ ಬಹುತೇಕರು ಮದ್ಯ ಕುಡಿದ ಮತ್ತಿನಲ್ಲಿದ್ದರು. ಕೆಲವರು ನೃತ್ಯವನ್ನು ನಿಲ್ಲಿಸದಂತೆ ನರ್ತಕಿಯರಿಗೆ ಸೂಚಿಸಿದ್ದರು. ಈ ಮಧ್ಯೆ ಆಯಾಸಗೊಂಡ ಹೀನಾ ಅವರು ನೃತ್ಯ ನಿಲ್ಲಿಸಿದರು. ಇದೇ ವೇಳೆ ಆರೋಪಿಗಳು ಹಾರಿಸಿದ ಗುಂಡು ಅವರ ಮುಖದತ್ತ ತೂರಿ ಬಂದಿದೆ ಎಂದು ಪ್ರತ್ಯಕ್ಷಗಳು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ...ಮದುವೆ ಮನೆಯಲ್ಲಿ ಕುಣಿಯುತ್ತಿದ್ದ ಯುವತಿ ನೃತ್ಯ ನಿಲ್ಲಿಸಿದ್ದಕ್ಕೆ ಗುಂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.