ನವದೆಹಲಿ: ಕನ್ನಡದ ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿಅವರ ಪ್ರಸಿದ್ಧ ಕಾದಂಬರಿ ‘ಅವಸ್ಥೆ‘ ಈಗ ಆಂಗ್ಲಭಾಷೆಯಲ್ಲೂ ಲಭ್ಯವಿದೆ ಎಂದು ಪ್ರಕಾಶಕ ಹಾರ್ಪರ್ ಕಾಲಿನ್ಸ್ ತಿಳಿಸಿದ್ದಾರೆ.

1978ರಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಮೊದಲ ರಾಜಕೀಯ ಕಾದಂಬರಿ. ಭ್ರಷ್ಟಾಚಾರ ಮತ್ತು ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ವಿರುದ್ಧ ಕ್ರಾಂತಿಕಾರಿ ರೈತ ನಾಯಕ ಕೃಷ್ಣಪ್ಪ ಗೌಡರು ನಡೆಸುವ ಹೋರಾಟದ ಕುರಿತ ಕಥೆಯನ್ನು ಒಳಗೊಂಡಿರುವ ಕೃತಿ.

ಇದನ್ನು ಓಲ್ಡ್ ವೆಸ್ಟ್ಬರಿಯ ಸುನಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ನಾರಾಯಣ ಹೆಗ್ಡೆ ಅವರು ಆಂಗ್ಲಭಾಷೆಗೆ ಅನುವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.