ಬಲರಾಮ್‌ಪುರ : ಕೆಲ ದಲಿತ ವ್ಯಕ್ತಿಗಳನ್ನು ಥಳಿಸಿದ ಆರೋಪದ ಮೇಲೆ ತುಳಸೀಪುರದ ಬಿಜೆಪಿ ಶಾಸಕ ಕೈಲಾಶ್‌ನಾಥ್ ಶುಕ್ಲಾ ಅವರ ಸಂಬಂಧಿ ಸೋನು ಶುಕ್ಲಾ ಮತ್ತು ಇತರ 11 ಮಂದಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆಯೇ ಈ ಪ್ರಕರಣ ನಡೆದಿದೆ. ದಲಿತರನ್ನು ತುಳಸೀಪುರ ತಾಲೂಕಿನ ದ್ವಾರದ ಬಳಿ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಈ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಕೇಶವ್ ಕುಮಾರ್ ಹೇಳಿದ್ದಾರೆ.

ರಾಕೇಶ್ ಎಂಬುವವರ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ಆರೋಪವನ್ನು ನಿರಾಕರಿಸಿರುವ ಶಾಸಕ ಕೈಲಾಶ್ ನಾಥ್, ‘ನನ್ನ ಹೆಸರಿಗೆ ಚ್ಯುತಿ ತರಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.