ಘಾಜಿಯಾಬಾದ್: ಇಲ್ಲಿನ ಇಂದಿರಾಪುರ ಪ್ರದೇಶದಲ್ಲಿ ₹132 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ಕೈಲಾಶ್ ಮಾನಸರೋವರ ಭವನ‘ವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಉದ್ಘಾಟಿಸಿದ್ದಾರೆ.

ಈ ನೂತನ ಭವನ 280 ಯಾತ್ರಾರ್ಥಿಗಳಿಗೆ ವಸತಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವಷ್ಟು ವಿಶಾಲವಾ ಗಿದೆ. ಪ್ರವಾಸಕ್ಕೆ ತೆರಳುವವರಿಗೆ ಸುತ್ತಮುತ್ತಲಿನ ತೀರ್ಥಕ್ಷೇತ್ರಗಳ ವಿವರ ನೀಡುವಂತಹ ಮಾಹಿತಿ ಕೇಂದ್ರವೂ ಇಲ್ಲಿದೆ.

‘ಈ ಭವನದ ನಿರ್ಮಾಣಕ್ಕೆ 2017ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಮೂರು ವರ್ಷಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯೂ ಆಗಿದೆ. ಇದು ಹೆಮ್ಮೆ ಪಡುವ ವಿಷಯ‘ ಎಂದು ಆದಿತ್ಯನಾಥ್ ಹೇಳಿದ್ದಾರೆ.

‘ಕೆಲವರಿಗೆ ಅಸೂಯೆ ಉಂಟು ಮಾಡುವಷ್ಟು ವೇಗವಾಗಿ ಈ ಭವನದ ನಿರ್ಮಾಣ ಕಾಮಗಾರಿ ನಡೆಯಿತು. ಹಿಂದೆ ಇಂಥ ಯೋಜನೆಗಳ ಪೂರ್ಣಗೊಳ್ಳಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದವು. ಈಗ ಎಲ್ಲ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ‘ ಎಂದು ಆದಿತ್ಯನಾಥ್ ಹೇಳಿದ್ದಾರೆ.

ಗಾಜಿಯಾಬಾದ್ ಸಂಸದ ವಿ ಕೆ ಸಿಂಗ್, ಶಾಸಕ ಸುನೀಲ್ ಮತ್ತು ಇತರರು ಕೈಲಾಶ್ ಮಾನಸ ಸರೋವರ್ ಭವನ ನಿರ್ಮಾಣ ಪ್ರಸ್ತಾಪಿಸಿದ ಮೇಲೆ, ನಮ್ಮ ಸರ್ಕಾರವೂ ಯಾತ್ರಾರ್ಥಿಗಳಿಗೆ ಉತ್ತಮ ಸೌಕರ್ಯ ನಿಡುವ ನಿಟ್ಟಿನಲ್ಲಿ ನೆರವು ನೀಡಲು ಮುಂದಾಯಿತು ಎಂದು ಆದಿತ್ಯನಾಥ್ ಅವರು ಭವನದ ಉದ್ಘಾಟನಾ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

‘ಕೈಲಾಸ ಮಾನಸ ಸರೋವರಕ್ಕೆ ತೆರಳುವ ಯಾತ್ರಿಕರಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ₹50 ಸಾವಿರ ದಿಂದ ₹1 ಲಕ್ಷಕ್ಕೆ ಹೆಚ್ಚಿಸಿದೆ‘ ಎಂದು ಅವರು ಹೇಳಿದ್ದಾರೆ.

‘ಉತ್ತರಾಖಂಡದ ಕೈಲಾಸ ಮಾನಸ ಸೋವರ, ಸಿಂಧು ದರ್ಶನ, ಕೇದಾರನಾಥ್, ಬದ್ರಿನಾಥ್, ಗಂಗೋತ್ರಿ ಮತ್ತು ಯಮನೋತ್ರಿ ದರ್ಶನಕ್ಕೆ ಪ್ರಯಾಣಿಸಲು ಬಯಸುವ ಯಾತ್ರಾರ್ಥಿಗಳಿಗಾಗಿ ಹೊಸ ಭವನವನ್ನು ನಿರ್ಮಾಣ ಮಾಡಲಾಗಿದೆ‘ ಎಂದು ಆದಿತ್ಯನಾಥ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.