ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಅಲಹಾಬಾದ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಂದ ಗೋಪಾಲ್ ಗುಪ್ತಾ ಅವರು ರಸ್ತೆ ಬದಿಯ ಅಂಗಡಿ ಒಂದರಲ್ಲಿ ಪಕೋಡಾ ಮತ್ತು ಪೂರಿಯನ್ನು ಎಣ್ಣೆಯಲ್ಲಿ ಕರಿಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಚಾರದ ವೇಳೆ ಪಕೋಡಾ ಅಂಗಡಿ ಒಂದರಲ್ಲಿ ಗುಪ್ತಾ ಪಕೋಡಾ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ಉದ್ಯೋಗವೇ ಇಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ ನಿಜವಾಗಿಯೂ ಉದ್ಯೋಗ ಇಲ್ಲದೇ ಇರುವುದು ವಿಪಕ್ಷಗಳಿಗೆ. ಪಕೋಡಾ ಮಾಡುವುದೂ ಒಂದು ಉದ್ಯೋಗ. ಜನರೇ ತಮ್ಮ ಅಂಗಡಿಗೆ ಕರೆಯುತ್ತಾರೆ. ಹೀಗಾಗಿ ಇಲ್ಲಿ ಬಂದು ಪಕೋಡಾ ಮಾಡಿದೆ. ಈ ಮೂಲಕ ಸ್ವಉದ್ಯೋಗವನ್ನು ಉತ್ತೇಜಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.