ಲಖನೌ: ಮಹಿಳೆಯರ ಕೂದಲನ್ನು ಪುರುಷರು ಕತ್ತರಿಸಬಾರದು ಹಾಗೂ ಅವರು ಮಹಿಳೆಯರ ಬಟ್ಟೆಗಳನ್ನೂ ಹೊಲಿಯಬಾರದು ಎಂಬ ಪ್ರಸ್ತಾವನೆಯೊಂದನ್ನು ಉತ್ತರ ಪ್ರದೇಶದ ಮಹಿಳಾ ಆಯೋಗ ಮುಂದಿರಿಸಿದೆ. ಇಂಥ ಕ್ರಮಗಳಿಂದ ಮಹಿಳೆಯರನ್ನು ಲೈಂಗಿಕ ಕಿರುಕುಳದಿಂದ ಪಾರು ಮಾಡಬಹುದಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

‘ಆಯೋಗದ ಮುಖ್ಯಸ್ಥೆ ಬಬಿತಾ ಚೌಹಾಣ್ ಅವರು ಅ.28ರಂದು ನಡೆದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮುಂದಿರಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರು ಇದನ್ನು ಬೆಂಬಲಿಸಿದರು. ಈ ಕುರಿತು ಕಾನೂನು ಜಾರಿ ಮಾಡುವಂತೆ ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ’ ಎಂದು ಆಯೋಗದ ಸದಸ್ಯೆ ಹಿಮಾನಿ ಅಗರ್ವಾಲ್ ಶುಕ್ರವಾರ ತಿಳಿಸಿದರು.

‘ಮಹಿಳೆಯರ ಬಟ್ಟೆ ಹೊಲಿಯಲು ಅವರ ದೇಹದ ಅಳತೆಯನ್ನು ಮಹಿಳಾ ಟೈಲರ್ಗಳೇ ತೆಗೆದುಕೊಳ್ಳಬೇಕು. ಜೊತೆಗೆ ಅಂಗಡಿಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು. ಸಲೂನ್ಗಳಲ್ಲಿ, ಬ್ಯೂಟಿ ಪಾರ್ಲರ್ಗಳಲ್ಲಿ ಮಹಿಳೆಯರ ಕೂದಲನ್ನು ಮಹಿಳೆಯರೇ ಕತ್ತರಿಸಬೇಕು’ ಎಂದರು.

‘ಇಂಥ ವೃತ್ತಿಗಳಲ್ಲಿ ಗಂಡಸರು ಕೆಲಸ ಮಾಡುವುದರಿಂದಲೇ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿವೆ. ಕೆಲವು ಗಂಡಸರ ಉದ್ದೇಶಗಳು ಸರಿ ಇರುವುದಿಲ್ಲ. ಹಾಗಂತ ಎಲ್ಲ ಗಂಡಸರಿಗೂ ಕೆಟ್ಟ ಉದ್ದೇಶಗಳಿರುತ್ತವೆ ಎಂದಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.