ಗಾಜಿಯಾಬಾದ್ (ಪಿಟಿಐ): ಖಾಸಗಿಯಾಗಿ ಟ್ಯೂಷನ್ ಹೇಳಿಕೊಡಲು ಹೌಸಿಂಗ್ ಸೊಸೈಟಿಗೆ ತೆರಳಿದ್ದ ಉರ್ದು ಶಿಕ್ಷಕನನ್ನು ಸುತ್ತುವರಿದ ಯುವಕರ ಗುಂಪೊಂದು ಬಲವಂತವಾಗಿ ಜೈ ಶ್ರೀ ರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದೆ.

‘ರಿಪಬ್ಲಿಕ್ ಟೌನ್ಶಿಪ್ನಲ್ಲಿರುವ ಸೊಸೈಟಿಯಲ್ಲಿ ನೆಲೆಸಿದ್ದ ಮನೋಜ್ ಕುಮಾರ್ ಮುಖ್ಯ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ’ ಎಂದು ಎಸಿಪಿ ಲಿಪಿ ನಾಗಇಚ್ ತಿಳಿಸಿದ್ದಾರೆ.

ಮೊಹಮ್ಮದ್ ಆಲಂಗೀರ್ ನಿತ್ಯ ಸೊಸೈಟಿಗೆ ಭೇಟಿ ನೀಡಿ, 16ನೇ ಮಹಡಿಯಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಮಂಗಳವಾರ ಎಂದಿನಂತೆ ಭೇಟಿ ನೀಡಿದ್ದ ವೇಳೆ ಕುಮಾರ್ ಹಾಗೂ ಕೆಲವು ನಿವಾಸಿಗಳು ತಡೆಯೊಡ್ಡಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿ ಪುನರಾ ವರ್ತಿಸುವಂತೆ ಆಲಂಗೀರ್ಗೆ ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ, ಲಿಫ್ಟ್ ಹತ್ತದಂತೆ ತಡೆಯೊಡ್ಡಿದ್ದಾರೆ. ಪರಿಸ್ಥಿತಿ ಕೈ ಮೀರಿರುವುದನ್ನು ಅರಿತ, ಭದ್ರತಾ ಸಿಬ್ಬಂದಿ ಮತ್ತು ಇತರರು ಅಲ್ಲಿಂದ ಹೊರಕಳುಹಿಸಿದರು’ ಎಂದು ಅಧಿಕಾರಿಗಳು ತಿಳಿಸಿದರು.

ಇದಾದ ಬಳಿಕ ಆಲಂಗೀರ್ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.