ನವದೆಹಲಿ: ರಕ್ಷಣಾ ವಿಷಯದಲ್ಲಿ ಸಹಕಾರ ಸೇರಿದಂತೆ ಉಭಯ ದೇಶಗಳ ಹಿತಾಸಕ್ತಿ ಭಾಗವಾಗಿ ನಿರ್ಣಾಯಕ ತಂತ್ರಜ್ಞಾನಗಳ ಅಭಿವೃದ್ಧಿ ವಿಷಯದಲ್ಲಿ ಭಾರತ ಮತ್ತು ಅಮೆರಿಕ ಮುಂಚೂಣಿಯಲ್ಲಿರುವುದು ಅಗತ್ಯ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮಂಗಳವಾರ ಹೇಳಿದರು.

ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಆಯೋಜಿಸಿದ್ದ ‘ಐಸಿಇಟಿ’ (ಇಂಡಿಯಾ–ಯುಎಸ್ ಇನಿಷಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜಿ) ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಐಸಿಇಟಿಯು ನಾವು ನಿರೀಕ್ಷೆ ಮಾಡುವುದಕ್ಕಿಂತಲೂ ಹೆಚ್ಚು ಸಾಧನೆ ಮಾಡಿದೆ’ ಎಂದು ಹೇಳಿದ ಡೊಭಾಲ್, ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ, ನವೋದ್ಯಮಗಳ ಸ್ಥಾಪನೆ, ಸೆಮಿಕಂಡಕ್ಟರ್ ಉದ್ಯಮದ ಮಹತ್ವ ಕುರಿತು ವಿವರಿಸಿದರು.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಮಾತನಾಡಿ, ‘ನಾವೀನ್ಯತೆ, ಉತ್ಪಾದನೆ ಹಾಗೂ ನಿಯೋಜನೆ ಎಂಬ ಮೂರು ಅಂಶಗಳು ಯಾವುದೇ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪಾಲುದಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಹೇಳಿದರು.

‘ಭಾರತೀಯ ಉದ್ಯಮಗಳಿಗೆ ಅಮೆರಿಕದಲ್ಲಿ ಬೆಂಬಲ ಇದೆ. ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಹಾಗೂ ಸಾಗಣೆ ವ್ಯವಸ್ಥೆಯನ್ನು ಬಲಪಡಿಸುವುದು ಯಾವುದೇ ಉತ್ಪಾದನಾ ಕ್ಷೇತ್ರದ ಯಶಸ್ಸಿಗೆ ಮುಖ್ಯವಾಗುತ್ತವೆ’ ಎಂದೂ ಹೇಳಿದರು.

‘ಐಸಿಇಟಿ’ ಉಪಕ್ರಮಕ್ಕೆ 2022ರ ಮೇನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಚಾಲನೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ಗಳು, ಬಯೋಟೆಕ್ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿ ಉಭಯ ದೇಶಗಳ ನಡುವಿನ ಒಪ್ಪಂದವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.