ಪುಣೆ: ಮಹಾರಾಷ್ಟ್ರದ ಜೈಲುಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಹಾಗೂ ಕೈದಿಗಳ ಚಲನವಲನಗಳ ಮೇಲೆ ನಿಗಾ ಇಡುವ ದೃಷ್ಟಿಯಿಂದ ಡ್ರೋನ್ಗಳನ್ನು ಬಳಸಲು ರಾಜ್ಯ ಕಾರಾಗೃಹ ಇಲಾಖೆ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ, ಎಂಟು ಕೇಂದ್ರ ಕಾರಾಗೃಹಗಳು, ಎರಡು ಜಿಲ್ಲಾ ಕಾರಾಗೃಹಗಳು ಹಾಗೂ ಎರಡು ತೆರೆದ ಜೈಲುಗಳಲ್ಲಿ ಒಟ್ಟು 12 ಜೈಲುಗಳಲ್ಲಿ ಡ್ರೋನ್ಗಳನ್ನು ನಿಯೋಜಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜೈಲು) ಅಮಿತಾಭ್ ಗುಪ್ತಾ ತಿಳಿಸಿದ್ದಾರೆ.

‘ ಡ್ರೋನ್ಗಳನ್ನು ರಾತ್ರಿ ಸಮಯದಲ್ಲಿ ಕಣ್ಗಾವಲುಗಾಗಿಯೂ ಬಳಸಿಕೊಳ್ಳಲಾಗುವುದು. ಇದರಿಂದ ಜೈಲಿನ ಆವರಣದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನೈಜ ಚಿತ್ರಣ ಪಡೆಯಲು ಸಹಾಯವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಯರವಾಡ, ಕೊಲ್ಲಾಪುರ, ನಾಸಿಕ್, ಸಂಭಾಜಿ ನಗರ, ತಲೋಜಾ, ಠಾಣೆ, ಅಮರಾವತಿ, ನಾಗ್ಪುರ, ಕಲ್ಯಾಣ್ ಮತ್ತು ಚಂದ್ರಾಪುರ ಕಾರಾಗೃಹಗಳಲ್ಲಿ ಕಣ್ಗಾವಲು ಡ್ರೋನ್ಗಳನ್ನು ಬಳಸಲಾಗುವುದು ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರದ ಆದೇಶದ ಮೇರೆಗೆ ಕಣ್ಗಾವಲುಗಾಗಿ ಡ್ರೋನ್ಗಳ ಬಳಕೆಗೆ ಆದ್ಯತೆ ನೀಡಲಾಗಿದೆ. ಜೈಲು ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ನಂತರ ಡ್ರೋನ್ ಬಳಸುವ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ ಎಂದು ಕಾರಾಗೃಹ ಇಲಾಖೆ ಎಂದಿದೆ.

ಇವನ್ನೂ ಓದಿ; ಮತ್ತೆ ಬಿಜೆಪಿಯತ್ತ ಮುಖ ಮಾಡಿದ ಟಿಎಂಸಿ ಮುಖಂಡ ಮುಕುಲ್ ರಾಯ್

ದೇಶದಲ್ಲಿ ಹೆಚ್ಚಿದ ತಾಪಮಾನ: 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದ ನಗರಗಳು..

ಮುಂಬೈನಲ್ಲಿ ಆ್ಯಪಲ್ ಮೊದಲ ಕಂಪ್ಯೂಟರ್ ನೋಡಿ ಪುಳಕಗೊಂಡ ಟಿಮ್ ಕುಕ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.