ಬಾಗಪತ್ (ಉತ್ತರಪ್ರದೇಶ): ಅಣ್ಣನ ನಿಧನದಿಂದ ವಿಧವೆಯಾದ ಅತ್ತಿಗೆಯನ್ನು ವರಿಸಿದ ಮತ್ತೊಬ್ಬ ಅಣ್ಣನನ್ನು ಇಬ್ಬರು ಕಿರಿಯ ಸೋದರರು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣವೊಂದು ಉತ್ತರ ಪ್ರದೇಶದ ಬಾಗಪತ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮೃತರನ್ನು ಈಶ್ವರ್ ಎಂಬವರ ಪುತ್ರ ಯಶ್ವೀರ್ (32) ಎಂದು ಗುರುತಿಸಲಾಗಿದೆ.

ಶುಕ್ರವಾರ ರಾತ್ರಿ ಯಶ್ವೀರ್ ಅವರನ್ನು ಗುಂಡಿಕ್ಕಿ ಕೊಂದಿರುವ ಬಗ್ಗೆ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಕೂಡಲೇ ಘಟನಾಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಾಗ್ಪತ್ ಸಹಾಯಕ ಪೊಲೀಸ್ ಅಧೀಕ್ಷಕ ಎನ್.ಪಿ. ಸಿಂಗ್ ಹೇಳಿದ್ದಾರೆ.

‘ಈಶ್ವರ್ ಅವರಿಗೆ ಸುಖ್ವೀರ್, ಯಶ್ವೀರ್, ಓಂವೀರ್, ಉದಯವೀರ್ ಎಂಬ ನಾಲ್ವರು ಗಂಡು ಮಕ್ಕಳಿದ್ದರು. ಕಳೆದ ವರ್ಷ ಸುಖ್ವೀರ್ ನಿಧನರಾದ ನಂತರ ಅವರ ಪತ್ನಿ ರಿತು ಅವರನ್ನು ಕಿರಿಯ ಸಹೋದರ ಯಶ್ವೀರ್ ಮದುವೆಯಾಗಿದ್ದರು. ಆದರೆ, ಈ ಮದುವೆಗೆ ಸಹೋದರರಲ್ಲಿ ಒಮ್ಮತ ಇರಲಿಲ್ಲ. ಈ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಯಶ್ವೀರ್ನನ್ನು ಈ ಇಬ್ಬರು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಎಎಸ್ಪಿ ತಿಳಿಸಿದ್ದಾರೆ.

ಬಸ್ ಚಾಲಕರಾಗಿದ್ದ ಯಶ್ವೀರ್ ಶುಕ್ರವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಇದೇ ವೇಳೆ ಮದ್ಯದ ಅಮಲಿನಲ್ಲಿ ಓಂವೀರ್ ಮತ್ತು ಉದಯವೀರ್ ತಮ್ಮ ತಾಯಿಯೊಂದಿಗೆ ಜಗಳವಾಡಿದ್ದರು. ಈ ಜಗಳ ವಿಕೋಪಕ್ಕೆ ಹೋಗಿ ಯಶ್ವೀರ್ ಗುಂಡಿಕ್ಕಿ ಕೊಂದಿದ್ದಾರೆ ಎಂದು ಎಎಸ್ಪಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.