ಕಾನ್ಪುರ (ಉತ್ತರ ಪ್ರದೇಶ): ನವರಾತ್ರಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಯತ್ನಿಸಿದ ಮುಸ್ಲಿಂ ಯುವಕನಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹಾಗೂ ಬಜರಂಗ ದಳ ಕಾರ್ಯಕರ್ತರು ಥಳಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಸ್ವರೂಪ ನಗರದ ಲಜಪತ್ ಭವನದಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ನವರಾತ್ರಿ ಕಾರ್ಯಕ್ರಮಕ್ಕೆ ಹಿಂದೂಯೇತರರು ಬರುವುದನ್ನು ತಡೆಯಲು ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಸ್ವಯಂ ಸೇವಕರು ತಪಾಸಣೆ ನಡೆಸುತ್ತಿದ್ದಾಗ ಘಟನೆ ನಡೆದಿದೆ.

ತಪಾಸಣೆ ವೇಳೆ ಯುವಕನನ್ನು ಧರ್ಮದ ಬಗ್ಗೆ ಪ್ರಶ್ನಿಸಿ, ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

'ಯುವಕನಿಗೆ ಥಳಿಸಿದ ಆರೋಪದಲ್ಲಿ ಅಪರಿಚಿತರ ವಿರುದ್ಧ ಮೊತಿಝೀಲ್ ಠಾಣಾಧಿಕಾರಿ ರವಿಕುಮಾರ್ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೊಳಗಾದವರನ್ನು ಗುರುತಿಸಿ, ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ' ಎಂದು ಡಿಸಿಪಿ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿಎಚ್ಪಿ ಜಿಲ್ಲಾ ಕಾರ್ಯದರ್ಶಿ ಯುವರಾಜ್ ದ್ವಿವೇದಿ, 'ನವರಾತ್ರಿ ಪ್ರಯುಕ್ತ 'ಗಾರ್ಬಾ' ಮತ್ತು 'ದಾಂಡಿಯಾ' ನೃತ್ಯ ಆಯೋಜಿಸಲಾಗಿತ್ತು. ಅನ್ಯಧರ್ಮದವರು ಪಾಳ್ಗೊಳ್ಳುವುದನ್ನು ತಡೆಯಲು ತಪಾಸಣೆ ನಡೆಸಲಾಗುತ್ತಿತ್ತು. ಎಚ್ಚರಿಕೆ ನೀಡಿದ್ದರ ಹೊರತಾಗಿಯೂ ಬೇರೆ ಕೋಮಿನ ಕೆಲವು ಯುವಕರು ಸ್ಥಳಕ್ಕೆ ಬಂದಿದ್ದರು. ಅವರನ್ನೆಲ್ಲ ಬಲವಂತವಾಗಿ ಹೊರಗೆ ಕಳುಹಿಸಲಾಯಿತು' ಎಂದಿದ್ದಾರೆ.
.Haryana Polls | ಪ್ರೀತಿ ಮತ್ತು ದ್ವೇಷದ ನಡುವಿನ ಹೋರಾಟ: ರಾಹುಲ್ ಗಾಂಧಿ.ಹರಿಯಾಣ ವಿಧಾನಸಭೆ ಚುನಾವಣೆ: ಮತ ಚಲಾಯಿಸಿ ಮದುವೆ ಮಂಟಪಕ್ಕೆ ತೆರಳಿದ ವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.