ಲಖನೌ: ತನ್ನ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ಮಹಿಳೆಯೊಬ್ಬರು ದೂರು ನೀಡಲು ಹೋದಾಗ ದೂರು ದಾಖಲಿಸಲು ಉತ್ತರ ಪ್ರದೇಶದ ಪೊಲೀಸರು ನಿರಾಕರಿಸಿದ್ದಾರೆ. ಅತ್ಯಾಚಾರ ಆಗಿಲ್ಲ ತಾನೇ ? ಅತ್ಯಾಚಾರ ಆದ ಮೇಲೆ ಬನ್ನಿ ಎಂದು ಪೊಲೀಸರು ಹೇಳಿರುವುದಾಗಿ ಹಿಂದೂಪುರ್ ಗ್ರಾಮದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಮೂರು ತಿಂಗಳ ಹಿಂದೆ ನಡೆದ ಘಟನೆ ಇದು. ಔಷಧಿ ಖರೀದಿಸಲು ಹೋಗುತ್ತಿದ್ದಾಗ ಅದೇ ಊರಿನ ಮೂವರು ವ್ಯಕ್ತಿಗಳು ನನ್ನನ್ನು ತಡೆದು ನನ್ನ ಬಟ್ಟೆಎಳೆದುಅತ್ಯಾಚಾರ ಮಾಡಲು ಯತ್ನಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ರೇಪ್ ತೊ ಹುವಾ ನಹೀ, ಜಬ್ ಹೋಗಾ ತಬ್ ಆನಾ (ಅತ್ಯಾಚಾರವಾಗಿಲ್ಲ ತಾನೇ, ಆದಾಗ ಬನ್ನಿ) ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:ಉನ್ನಾವ್ ಅತ್ಯಾಚಾರ ಪ್ರಕರಣ ತ್ವರಿತ ನ್ಯಾಯಾಲಯಕ್ಕೆ : ಯೋಗಿ ಆದಿತ್ಯನಾಥ್

ಮೂರು ತಿಂಗಳಿನಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದರೂ ಅವರು ದೂರು ಸ್ವೀಕರಿಸುತ್ತಿಲ್ಲ.ಈ ಘಟನೆ ನಡೆದ ನಂತರ ನಾನು ಮಹಿಳಾ ಸಹಾಯವಾಣಿ 1090ಕ್ಕೆ ಕರೆ ಮಾಡಿದೆ. ಅವರು ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡುವಂತೆ ಹೇಳಿದರು. ಈ ಸಂಖ್ಯೆಗೆ ಕರೆ ಮಾಡಿದಾಗ ಉನ್ನಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಹೇಳಿದರು. ಠಾಣೆಗೆ ಹೋಗಿ ದೂರು ನೀಡಿದರೆ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸುತ್ತಿದ್ದಾರೆ.

ಇದನ್ನೂ ಓದಿ:ಸರ್ಕಾರದ ಭರವಸೆ ನಂಬಿದ ಕುಟುಂಬ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರ

ಆರೋಪಿಗಳು ಈಗ ನನಗೆ ಕೊಲೆ ಬೆದರಿಕೆಯನ್ನೊಡ್ಡಿದ್ದಾರೆ. ಅವರು ಪ್ರತಿದಿನ ನನ್ನ ಮನೆಗೆ ಬಂದು, ದೂರು ದಾಖಲಿಸಿದರೆ ಅದರ ಪರಿಣಾಮ ಎದುರಿಸಲು ಸಿದ್ಧವಾಗಿರು ಎಂದು ಬೆದರಿಕೆಯೊಡ್ಡಿ ಹೋಗುತ್ತಿದ್ದಾರೆ ಎಂದು ಮಹಿಳೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.