ನೊಯಿಡಾ: ರಾಜ್ಯದಲ್ಲಿ ಪೊಲೀಸ್ ವಶದಲ್ಲಿರುವಾಗ ಮೃತಪಟ್ಟ ಪ್ರತಿಯೊಂದು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪಾಂಖುರಿ ಪಾಠಕ್ ಶುಕ್ರವಾರ ಆಗ್ರಹಿಸಿದ್ದಾರೆ.
.ಕಸ್ಟಡಿ ಸಾವು: ಮೂವರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು.
ರಾಜ್ಯದಲ್ಲಿ ಪೊಲೀಸ್ ಆಡಳಿತ ನಿಯಂತ್ರಣ ತಪ್ಪಿದೆ. ಇದು ಭಾರಿ ಆತಂಕಕಾರಿ ಹಾಗೂ ಅಪಾಯಕಾರಿ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪೊಲೀಸ್ ವಶದಲ್ಲಿರುವವರ ಸಾವಿನಲ್ಲಿ ಉತ್ತರ ಪ್ರದೇಶವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ.
.ಹರಟೆಕಟ್ಟೆ Podcast: ಕಸ್ಟಡಿ ಸಾವು ಮತ್ತು ಮಾನವ ಹಕ್ಕುಗಳು.
ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರು ಪೊಲೀಸ್ ವಶದಲ್ಲಿದ್ದಾಗಲೇ ಗುರುವಾರ ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೇ ಪಾಂಖುರಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಬಾಂಡಾ ಜೈಲಿನಲ್ಲಿದ್ದ ಅನ್ಸಾರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರಿಗೆ ಜೈಲಿನಲ್ಲಿ ವಿಷ ನೀಡಲಾಗುತ್ತಿತ್ತು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
.275 ಕಸ್ಟಡಿ ಅತ್ಯಾಚಾರ ಪ್ರಕರಣ ದಾಖಲು | ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ: NCRB.
‘ಉತ್ತರ ಪ್ರದೇಶದಲ್ಲಿ ಪ್ರತಿದಿನ ಕಸ್ಟಡಿ ಸಾವುಗಳು ವರದಿಯಾಗುತ್ತಿವೆ. ಕಸ್ಟಡಿ ಸಾವಿನಲ್ಲಿ ಉತ್ತರ ಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಇದು ಇದೆ. ಸತ್ತವರಲ್ಲಿ ದಲಿತರು, ಮುಸ್ಲಿಮರು, ವ್ಯಾಪಾರಿಗಳು, ಬ್ರಾಹ್ಮಣರು, ಹಿಂದುಗಳಿದ ವರ್ಗದವರು ಇದ್ದಾರೆ. ಈ ಸಾವುಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಸರ್ಕಾರ ಹಾಗೂ ಪೊಲೀಸ್ ಆಡಳಿತ ನಿಯಂತ್ರಣದಲ್ಲಿಲ್ಲ. ಇದು ಸಾರ್ವಜನಿಕರಿಗೆ ಮತ್ತು ಕಾನೂನಿಗೆ ಅತ್ಯಂತ ಆತಂಕಕಾರಿ ಮತ್ತು ಅಪಾಯಕಾರಿ’ ಎಂದು ಬರೆದುಕೊಂಡಿರುವ ಅವರು ಹಲವು ಪತ್ರಿಕಾ ವರದಿಗಳನ್ನು ಲಗತ್ತಿಸಿದ್ದಾರೆ.
.ಉತ್ತರ ಪ್ರದೇಶ: ಬಿಜೆಪಿಯ ‘ಮಿಷನ್ 80’ ಹಾದಿ ಕಠಿಣ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.