ಲಖನೌ: ವೇದ ಕಾಲದ ಋಷಿ ಭಾರದ್ವಾಜ ಮೊದಲಿಗೆ ವಿಮಾನದ ಪರಿಕಲ್ಪನೆಯನ್ನು ಮೂಡಿಸಿದ್ದರು. ಆದರೆ, ಆವಿಷ್ಕಾರದ ಗೌರವ ರೈಟ್ ಸಹೋದರರ ಪಾಲಾಯಿತು ಎಂದು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸೋಮವಾರ ಹೇಳಿದ್ದಾರೆ.

ಇಲ್ಲಿನ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಭಾಷಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಪುರಾತನ ಕಾಲದ ಋಷಿಮುನಿಗಳು ಹಾಗೂ ವಿದ್ವಾಂಸರು ಹಲವು ಮಹತ್ವದ ಶೋಧನೆ ಮತ್ತು ಆವಿಷ್ಕಾರಗಳನ್ನು ಮಾಡಿದ್ದಾರೆ. ಅವು ಈ ಕಾಲದಲ್ಲಿಯೂ ಪ್ರಸ್ತುತತೆ ಉಳಿಸಿಕೊಂಡಿದ್ದು, ಸಮಾಜಕ್ಕೆ ಅನುಕೂಲ ಮಾಡಿಕೊಟ್ಟಿವೆ ಎಂಬುದಕ್ಕೆ ವಿಮಾನನ ತಯಾರಿ ಉತ್ತಮ ಉದಾಹರಣೆಯಾಗಿದೆ. ಋಷಿ ಭಾರದ್ವಾಜ ವಿಮಾನದ ಪರಿಕಲ್ಪನೆಕಾರ. ಆದರೆ, ಆವಿಷ್ಕಾರದ ಕೀರ್ತಿ ಮತ್ತೊಂದು ದೇಶದ ‘ರೈಟ್’ ಸಹೋದರರ ಪಾಲಾಯಿತು’ ಎಂದು ಪ್ರತಿಪಾದಿಸಿದ್ದಾರೆ.

ನಮ್ಮ ಪೂರ್ವಜರು ಮಾಡಿರುವ ಅದ್ವಿತೀಯ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಅರಿತು, ಅವರ ಸಾಧನೆಯನ್ನು ಪ್ರಶಂಸಿಸಲು ವಿದ್ಯಾರ್ಥಿಗಳು ಪ್ರಾಚೀನ ಭಾರತೀಯ ಗ್ರಂಥಗಳನ್ನು ಅಧ್ಯಯನ ಮಾಡಬೇಕು. ವಿಶ್ವವಿದ್ಯಾಲಯಗಳೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಆನಂದಿಬೆನ್ ಅವರು ಇದೇ ವೇಳೆ ಕರೆ ನೀಡಿದ್ದಾರೆ.

ಪುರಾತನ ಗ್ರಂಥಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸಬೇಕು. ಈ ಮೂಲಕ ಅಧ್ಯಯನವನ್ನು ಸುಲಭಗೊಳಿಸಿ, ಈ ಗ್ರಂಥಗಳಲ್ಲಿರುವ ಜ್ಞಾನ ಭಂಡಾರವು ಹೆಚ್ಚಿನ ಜನರನ್ನು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವವಿದ್ಯಾಲಯಗಳಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.