ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣದಲ್ಲಿ ಕಾಂಗ್ರೆಸ್ ಬರಲಿದೆ. ಟ್ರೆಂಡ್ ಬದಲಾಗಲಿದೆ: ಆದಿತ್ಯ ಸುರ್ಜೇವಾಲ

Published : 8 ಅಕ್ಟೋಬರ್ 2024, 7:48 IST
Last Updated : 8 ಅಕ್ಟೋಬರ್ 2024, 7:48 IST
ಫಾಲೋ ಮಾಡಿ
Comments

ಅಂಬಾಲ: ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಟ್ರೆಂಡ್‌ನಲ್ಲಿ ಮುಂದಿದ್ದ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯತ್ತ ದಾಪುಗಾಲಿಟ್ಟಿದೆ.

ಜುಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸ್ತಿಪಟು ವಿನೇಶ್ ಫೋಗಟ್ ಆರಂಭಿಕ ಹಿನ್ನಡೆ ಬಳಿಕ 4 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಗರ್ಹಿ ಸಂಪ್ಲಾ-ಕಿಲೋಯ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭೂ‍ಪಿಂದರ್ ಸಿಂಗ್ ಹೂಡಾ ಅವರು 29,920 ಮತಗಳನ್ನು ಗಳಿಸಿ 22,182 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕೈಥಾಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆದಿತ್ಯ ಸುರ್ಜೇವಾಲಾ 17,910 ಮತ ಪಡೆದು, 2,623 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

‘ಹರಿಯಾಣದಲ್ಲಿ ಹಲವೆಡೆ ಇಲ್ಲಿಯವರೆಗೆ ಕೇವಲ ಎರಡು ಸುತ್ತು ಎಣಿಕೆ ನಡೆದಿದೆ. ಮೂರನೇ ಸುತ್ತಿನ ಮತ ಎಣಿಕೆಯಲ್ಲಿ 2600 ಮತಗಳಿಂದ ಮುಂದಿದ್ದೇನೆ. ಎರಡು ಸುತ್ತಿನ ನಂತರವಷ್ಟೇ ಟ್ರೆಂಡ್ ಹೇಳಲಾರೆ. ಕನಿಷ್ಠ 10 ಸುತ್ತಿನ ನಂತರ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯಲಿದೆ ಎಂದು ಆದಿತ್ಯ ಹೇಳಿದ್ದಾರೆ.

ಮಧ್ಯಾಹ್ನ 1 ಗಂಟೆ ಟ್ರೆಂಡ್ ಪ್ರಕಾರ, ಹರೊಇಯಾಣದ 90 ಕ್ಷೇತ್ರಗಳ ಪೈಕಿ 50ರಲ್ಲಿ ಬಿಜೆಪಿ, 34ರಲ್ಲಿ ಕಾಂಗ್ರೆಸ್‌, 2 ಕ್ಷೇತ್ರಗಳಲ್ಲಿ ಐಎನ್‌ಎಲ್‌ಡಿ ಮತ್ತು 4 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT