ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿ ಮೂಲ ಪತ್ತೆ ವಿಚಾರ: ಕೇಂದ್ರದ ಸೂಚನೆ ತಿರಸ್ಕರಿಸಿದ ವಾಟ್ಸ್‌ಆ್ಯಪ್‌

Last Updated 24 ಆಗಸ್ಟ್ 2018, 6:08 IST
ಅಕ್ಷರ ಗಾತ್ರ

ನವದೆಹಲಿ:ಸುಳ್ಳು ಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಹತ್ತಿಕ್ಕಲು, ಅವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ನೀಡಿದ್ದ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆ್ಯಪ್‌ ಸಂಸ್ಥೆ ಹೇಳಿದೆ.

‘ಜನರು ತಮ್ಮ ಕುಟುಂಬದವರು, ವೈದ್ಯರು, ಬ್ಯಾಂಕ್‌ ಅಧಿಕಾರಿಗಳು ಸೇರಿದಂತೆ ಹಲವರೊಡನೆ ಸೂಕ್ಷ್ಮ ಸಂಭಾಷಣೆಗಳನ್ನು ನಡೆಸಲು ವಾಟ್ಸ್‌ಆ್ಯಪ್‌ ಅನ್ನು ಅವಲಂಭಿಸಿದ್ದಾರೆ. ಸಂದೇಶಗಳ ಮೂಲ ಪತ್ತೆ ಹಚ್ಚುವಿಕೆಯಿಂದ ಜನರ ಖಾಸಗೀತನಕ್ಕೆ ಅಡ್ಡಿಪಡಿಸಿದಂತಾಗುತ್ತದೆ. ಅದಲ್ಲದೆ ದುರ್ಬಳಕೆ ಸಾಧ್ಯತೆಯನ್ನು ಸೃಷ್ಟಿಸುತ್ತದೆ’ ಎಂದು ಫೇಸ್‌ಬುಕ್‌ ಒಡೆತನದ ವಾಟ್ಸ್‌ಆ್ಯಪ್‌ ಸಂಸ್ಥೆ ತಿಳಿಸಿದೆ.

‘ಸದ್ಯ ಒದಗಿಸಿರುವ ಗೌಪ್ಯತೆ ಸುರಕ್ಷತೆಯನ್ನು ವಾಟ್ಸ್‌ಆ್ಯಪ್‌ ದುರ್ಬಲಗೊಳಿಸುವುದಿಲ್ಲ. ಬದಲಾಗಿ ಭಾರತದಲ್ಲಿ ಜನರೊಡನೆ ನಿಕಟವಾಗಿ ಕಾರ್ಯನಿರ್ವಹಿಸಿ, ಆ ಮೂಲಕ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸುವಂತೆ ಮತ್ತು ಸುರಕ್ಷಿತವಾಗಿರುವಂತೆ ಮಾಹಿತಿ ನೀಡುವತ್ತ ಗಮನಹರಿಸುತ್ತೇವೆ’ ಎಂದು ಸಂಸ್ಥೆಯ ವಕ್ತಾರ ಹೇಳಿದ್ದಾರೆ.

ಆದಾಗ್ಯೂ, ‘ವಾಟ್ಸ್‌ಆ್ಯಪ್‌ ಸೇರಿದಂತೆ ಹಲವು ತಾಣಗಳ ಮೂಲಕ ಸುಳ್ಳು ಸುದ್ದಿಗಳ ಪ್ರಸಾರದಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇರುವ ನಿದರ್ಶನಗಳನ್ನು ಸಚಿವಾಲಯ ನೀಡಿದೆ. ಹೀಗಾಗಿ ಸುಳ್ಳು ಸುದ್ದಿಗಳ ಮೂಲ ಪತ್ತೆಗೆ ತಾಂತ್ರಿಕ ಅನ್ವೇಷಣೆಗಳನ್ನು ಮುಂದುವರಿಸಬೇಕು. ಒಂದು ವೇಳೆ ದೊಡ್ಡ ಪ್ರಮಾಣದ ಗಲಭೆಗೆ ಕಾರಣವಾಗುವಂತಹ ಪ್ರಚೋಧನಾಕಾರಿ ಸಂದೇಶಗಳು ಪ್ರಸಾರವಾದರೆ ಅವುಗಳ ಮೂಲ ಪತ್ತೆ ಹಚ್ಚಲು ಸಹಾಯವಾಗಲಿದೆ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ.

ದೇಶದಲ್ಲಿ ಅಸ್ತಿತ್ವದಲ್ಲಿರುವ ವಾಟ್ಸ್‌ಆ್ಯಪ್‌ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಭಾರತೀಯ ಕಾನೂನು ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದೂ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT