ನವದೆಹಲಿ: ‘ಮಹತ್ವಾಕಾಂಕ್ಷೆಯ ಜಿಲ್ಲೆಗಳು’ ಕಾರ್ಯಕ್ರಮದ ಆಧಾರದಲ್ಲಿ ಈಗ ‘ಮಹತ್ವಾಕಾಂಕ್ಷೆಯ ಬ್ಲಾಕ್ಗಳು’ ಕಾರ್ಯಕ್ರಮವನ್ನು ರೂಪಿಸಿದ್ದು, ಇದರ ಯಶಸ್ಸು ಪರಿಶೀಲಿಸಲು ಮುಂದಿನ ವರ್ಷ ನಾನೇ ಬರುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಮಹತ್ವಾಕಾಂಕ್ಷೆಯ ಜಿಲ್ಲೆಗಳು’ ಕಾರ್ಯಕ್ರಮವು 112 ಜಿಲ್ಲೆಗಳಲ್ಲಿ 25 ಕೋಟಿಗೂ ಅಧಿಕ ಜನರ ಜೀವನಗತಿಯನ್ನೇ ಬದಲಿಸಿದೆ. ಜೀವನದ ಗುಣಮಟ್ಟ ಸುಧಾರಿಸಿದೆ. ಅಂತೆಯೇ ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 100 ಬ್ಲಾಕ್ಗಳು ಅಭಿವೃದ್ಧಿ ಕಾಣಲಿವೆ’ ಎಂದು ಹೇಳಿದರು.

‘ಇದು, ಈಗ ಮಹಾತ್ವಾಕಾಂಕ್ಷೆಯ ಬ್ಲಾಕ್ಗಳು ಕಾರ್ಯಕ್ರಮದ ಜಾರಿಗೂ ಪ್ರೇರಣೆಯಾಗಿದೆ’ ಎಂದು ಬ್ಲಾಕ್ ಹಂತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ‘ಸಂಕಲ್ಪ ಸಪ್ತಾಹ’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಇಲ್ಲಿ ಮಾತನಾಡಿದರು.

‘ನನಗೆ ವಿಶ್ವಾಸವಿದೆ. 2024ರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಮತ್ತೆ ಭೇಟಿಯಾಗೋಣ. ‘ಮಹತ್ವಾಕಾಂಕ್ಷೆಯ ಬ್ಲಾಕ್ಗಳು’ ಕಾರ್ಯಕ್ರಮದ ಯಶಸ್ಸಿನ ಮೌಲ್ಯಮಾಪನ ಮಾಡೋಣ. 2024ರ ಅಕ್ಟೋಬರ್ನಲ್ಲಿ ನಿಮ್ಮ ಜೊತೆ ಮಾತನಾಡುತ್ತೇನೆ’ ಎಂದು ಹೇಳಿದರು.

‘ಭಾರತ ಮಂಟಪ’ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಅಧಿಕಾರಿಗಳು, 3000ಕ್ಕೂ ಹೆಚ್ಚು ಪಂಚಾಯತ್ ಮತ್ತು ಬ್ಲಾಕ್ ಹಂತದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಲ್ಲದೇ ರೈತರು, ಸ್ಥಳೀಯರು, ಪಂಚಾಯಿತಿ ಹಂತದ ಅಧಿಕಾರಿಗಳು ಸೇರಿದಂತೆ ಎರಡು ಲಕ್ಷಕ್ಕೂ ಅಧಿಕ ಜನರು ವರ್ಚುವಲ್ ಸ್ವರೂಪದಲ್ಲಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವಿವಿಧ ಸಚಿವಾಲಯಗಳ ಅಧಿಕಾರಿಗಳು 100 ಬ್ಲಾಕ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗಿರುವ ವಿವಿಧ ರಾಷ್ಟ್ರೀಯ ಅಳತೆಗೋಲಿನಲ್ಲಿ ಅಭಿವೃದ್ಧಿಯು ರಾಷ್ಟ್ರೀಯ ಸರಾಸರಿಗಿಂತಲೂ ಉತ್ತಮವಾಗಿರುವಂತೆ ಕ್ರಮವಹಿಸಬೇಕು’ ಎಂದು ಹೇಳಿದರು.

‘ನನ್ನಂತೆ ಕೆಲವರಿಗಷ್ಟೇ ದೀರ್ಘಕಾಲ ಸರ್ಕಾರ ಮುನ್ನಡೆಸುವ ಅವಕಾಶ ಸಿಗಲಿದೆ. ನನ್ನ ಅನುಭವದ ಪ್ರಕಾರ, ಬಜೆಟ್ನಿಂದಷ್ಟೇ ಬದಲಾವಣೆ ಆಗದು. ಸಂಪನ್ಮೂಲದ ಬಳಕೆ ಮತ್ತು ಸಂಘಟಿತ ಯತ್ನದಿಂದ ಹೆಚ್ಚುವರಿ ಆರ್ಥಿಕ ನೆರವು ಇಲ್ಲದೇ ಅಭಿವೃದ್ಧಿ ಸಾಧ್ಯವಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವು ಜಾರಿಗೊಂಡಿದ್ದ ಉತ್ತರ ಪ್ರದೇಶದ ಬಹೇರಿ, ಜಮ್ಮು ಮತ್ತು ಕಾಶ್ಮೀರದ ಮನ್ಕೋಟೆ, ಮೇಘಾಲಯದ ರೆಸುಬೆಲ್ಪರ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆಗೂ ಪ್ರಧಾನಿ ಸಂವಾದ ನಡೆಸಿದರು.
.ಗಾಂಧಿ ಜಯಂತಿ: ಅ.1ರಂದು ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ ಪ್ರಧಾನಿ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.