ಚೆನ್ನೈ: ಹೊಗೇನಕಲ್ ಜಲ ಯೋಜನೆಯ ಎರಡನೇ ಹಂತದ ಕಾಮಗಾರಿ ಕುರಿತಂತೆ ಡಿಎಂಕೆ ನೇತೃತ್ವದ ಸರ್ಕಾರವನ್ನು ಬೆಂಬಲಿಸಲಾಗುವುದು ಎಂದು ಎಐಎಡಿಎಂಕೆ ಭಾನುವಾರ ಹೇಳಿದೆ.

ಇದೇ ವೇಳೆ ಯೋಜನೆಗೆ ಆಕ್ಷೇಪ ಎತ್ತಿರುವ ಕರ್ನಾಟಕ ಸರ್ಕಾರದ ನಿಲುವನ್ನು ಖಂಡಿಸಿದೆ. ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವುದು ಇದರ ಗುರಿ ಎಂದು ತಮಿಳುನಾಡು ಸರ್ಕಾರ ಹೇಳಿಕೊಂಡಿದೆ.

ಈ ಕುರಿತ ಹೇಳಿಕೆಯಲ್ಲಿ ಎಐಎಡಿಎಂಕೆ ಸಂಯೋಜಕ ಒ.ಪನ್ನೀರ್ಸೆಲ್ವಂ ಅವರು, ‘ಕರ್ನಾಟಕ ಸರ್ಕಾರ ಸಕಾಲದಲ್ಲಿ ಕಾವೇರಿ ನೀರು ಹರಿಸುತ್ತಿಲ್ಲ. ಕೇವಲ ಹೆಚ್ಚುವರಿ ನೀರಷ್ಟೇ ಹರಿದುಬರುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.