ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಟ, ರಾಜಕಾರಣಿ ರಜನಿಕಾಂತ್ ಭಾನುವಾರ ಹೇಳಿದ್ದಾರೆ.
ನಾನು ಯಾರಿಗೂ ಬೆಂಬಲ ನೀಡುವುದಿಲ್ಲ, ಯಾವುದೇ ಪಕ್ಷ ತಮ್ಮ ಪ್ರಚಾರಕ್ಕಾಗಿ ಅಥವಾ ಲೋಗೊಗಳಿಗೆ ನನ್ನ ಚಿತ್ರವನ್ನು ಬಳಸಬಾರದು ಎಂದು ರಜನಿಕಾಂತ್ ಹೇಳಿಕೆ ನೀಡದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಪಕ್ಷ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ.ಹಾಗಾಗಿ ಯಾರೊಬ್ಬರೂ ರಜನಿ ಮಕ್ಕಳ್ ಮಂದ್ರಂ ಮತ್ತು ರಜನಿ ಫ್ಯಾನ್ ಕ್ಲಬ್ ಹೆಸರಿನಲ್ಲಿ ನನ್ನ ಫೋಟೊ ಅಥವಾ ಬಾವುಟವನ್ನು ಯಾವುದೇ ಪಕ್ಷದ ಪ್ರಚಾರಕ್ಕಾಗಿ ಬಳಸಬಾರದು ಎಂದು ರಜನಿ ಹೇಳಿದ್ದಾರೆ.

ತಮಿಳುನಾಡಿನ ನೀರಿನ ವಿವಾದವನ್ನು ಪರಿಹರಿಸಲು ಸಾಧ್ಯವಿರುವ ಪಕ್ಷಕ್ಕೆ ಮತ ನೀಡಿ ಎಂದು ರಜನಿ ಜನರಿಗೆ ಕರೆ ನೀಡಿದ್ದಾರೆ.
2017 ಡಿಸೆಂಬರ್ 31ರಂದು ರಜನಿಕಾಂತ್ ಅವರುರಜನಿ ಮಕ್ಕಳ್ ಮಂದ್ರಂ ಎಂಬ ಪಕ್ಷ ರಚಿಸಿ ರಾಜಕೀಯಕ್ಕೆ ಕಾಲಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.