ಹೈದರಾಬಾದ್ (ಪಿಟಿಐ): ಆಡಳಿತಾರೂಢ ಬಿಆರ್ಎಸ್ ಸರ್ಕಾರವನ್ನು ಚುನಾವಣೆಯಲ್ಲಿ ಸಮಾಧಿ ಮಾಡುವವರೆಗೂ ಪಕ್ಷವು ವಿರಮಿಸುವುದಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಹೇಳಿದರು.

ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ಶುಕ್ರವಾರ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡ ನಂತರ ಪಕ್ಷದ ಸಭೆಯಲ್ಲಿ ಮಾತನಾಡಿದ ರೆಡ್ಡಿ, ರಾಜ್ಯದಲ್ಲಿ ಬಿಆರ್ಎಸ್ ಸೋಲಿಸುವ ಉದ್ದೇಶದಿಂದ ಒಗ್ಗಟ್ಟಿನಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ಕರ್ನಾಟಕ ಮತ್ತು ಪುದುಚೇರಿಯ ನಂತರ ಬಿಜೆಪಿ ಅಧಿಕಾರಕ್ಕೆ ಬರುವ ದಕ್ಷಿಣ ರಾಜ್ಯಗಳಲ್ಲಿ ತೆಲಂಗಾಣವೂ ಒಂದು ಎಂಬುದಾಗಿ ಬಿಜೆಪಿ ಹಿರಿಯ ನಾಯಕರು ನಂಬಿದ್ದಾರೆ ಎಂದರು.

ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಉಲ್ಲೇಖಿಸಿದ ರೆಡ್ಡಿ, ‘ನಯಾ ನಿಜಾಮ್’ ಮತ್ತು ಅವರ ಕುಟುಂಬವು ತಾವು ತೆಲಂಗಾಣದ ಮಾಲೀಕರು ಮತ್ತು ರಾಜರು ಎಂದು ಭಾವಿಸುತ್ತಾರೆ. ರಾಜ್ಯವು ಅವರ ಸಂತತಿಗೆ ನಿಷ್ಠರಾಗಿರಬೇಕು ಎಂದು ಭಾವಿಸುತ್ತಾರೆ ಎಂದು ಹೇಳಿದರು.

‘ ಹಿರಿಯ ಮುಖಂಡ ಸಂಜಯ್ ಮತ್ತು ಇತರ ನಾಯಕರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇನೆ ಮತ್ತು ಬಿಆರ್ಎಸ್ ಸರ್ಕಾರವನ್ನು ಅಬಿಡ್ಸ್ ಅಡ್ಡರಸ್ತೆಯಲ್ಲಿ (ಹೈದರಾಬಾದ್) ಸಮಾಧಿ ಮಾಡುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.