ನೋಯ್ಡಾ: ಗ್ರೇಟರ್ ನೋಯ್ಡಾದ ವೈನ್ಶಾಪ್ನಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮದ್ಯ ನೀಡಲು ನಿರಾಕರಿಸಿದ ಅಂಗಡಿಯ ಕೆಲಸಗಾರನ ಮೇಲೆ ಮೂವರು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಸ್ರಾಖ್ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಹೈಬತ್ಪುರ ಗ್ರಾಮದ ವೈನ್ಶಾಪ್ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹರಿ ಓಂ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಮುಚ್ಚಿದ್ದ ವೈನ್ಶಾಪ್ ಅನ್ನು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ತೆಗೆಸಿದ ಮೂವರು ಯುವಕರು, ಮದ್ಯ ಮಾರಾಟ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಅಂಗಡಿಯ ಕೆಲಸಗಾರ ಒಪ್ಪದಿದ್ದಾಗ, ಅವರ ನಡುವೆ ಜಗಳ ನಡೆದಿದೆ. ಆಗ ಈ ಮೂವರಲ್ಲಿ ಒಬ್ಬನು, ತನ್ನ ಬಳಿ ಇದ್ದ ದೇಶಿ ನಿರ್ಮಿತ ಪಿಸ್ತೂಲ್ನಿಂದ ಕೆಲಸಗಾರನಿಗೆ ಗುಂಡು ಹಾರಿಸಿದನು. ಬಳಿಕ ಎಲ್ಲರೂ ಪರಾರಿಯಾದರು. ಗಾಯಗೊಂಡಿದ್ದ ಹರಿ ಓಂ ಅವರನ್ನು ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರು ಬದುಕಲಿಲ್ಲ’ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರೀಯ ನೋಯ್ಡಾ) ಸುನಿತಿ ತಿಳಿಸಿದರು.

ಈ ಕುರಿತು ಪ್ರಕರಣ ದಾಖಲಾಗಿದೆ. ಸ್ಥಳ ಪರಿಶೀಲಿಸಿ, ತನಿಖೆ ಪ್ರಾರಂಭಿಸಲಾಗಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.