ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ಮದ್ಯ ಮಾರಾಟ ಮಳಿಗೆಗಳ ಸಿಬ್ಬಂದಿಯಲ್ಲಿ ಮಹಿಳೆಯರ ಪ್ರಾಬಲ್ಯ!

Published : 19 ಸೆಪ್ಟೆಂಬರ್ 2024, 14:57 IST
Last Updated : 19 ಸೆಪ್ಟೆಂಬರ್ 2024, 14:57 IST
ಫಾಲೋ ಮಾಡಿ
Comments

ತಿರುವನಂತಪುರ: ಕೇರಳದಲ್ಲಿ ಸರ್ಕಾರಿ‌ ಸ್ವಾಮ್ಯದ ಮದ್ಯ ಮಾರಾಟ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯಲ್ಲಿ ಶೇ 50ಕ್ಕೂ ಹೆಚ್ಚು ಮಹಿಳೆಯರಿದ್ದಾರೆ.

ಬಿಇವಿಸಿಒ ಎಂದೇ ಕರೆಯಲಾಗುವ ಕೇರಳ ಸರ್ಕಾರ ಪಾನೀಯ ನಿಗಮ (ಕೆಎಸ್‌ಬಿಸಿ) ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಮದ್ಯ ಮಾರಾಟ ಮಾಡುವ ಕಾರ್ಯಕ್ಕೂ ಮಹಿಳೆಯರನ್ನೇ ನಿಯೋಜಿಸಿದ್ದು, ದೇಶದಲ್ಲೇ ಈ ಹೆಜ್ಜೆ ಇರಿಸಿದ ಮೊದಲ ರಾಜ್ಯವಾಗಿದೆ.

‘ಮೊದಲಿಗೆ ನನಗೆ ಆತಂಕವಿತ್ತು. ಈಗ ಕೆಲಸ ಆರಂಭಿಸಿ ಆರು ತಿಂಗಳು ಕಳೆಯಿತು. ಕೆಲಸ ಸುಗಮವಾಗಿ ನಡೆದಿದ್ದು, ಅಂತಹ ಸಮಸ್ಯೆ ಎದುರಾಗಿಲ್ಲ’ ಎಂದು ಮಳಿಗೆಯೊಂದರಲ್ಲಿ ಮದ್ಯ ಮಾರಾಟಗಾರ್ತಿ ಆಗಿರುವ ಲೀನಾ ಅವರು ಪ್ರತಿಕ್ರಿಯಿಸಿದರು.

‘ಬಿಇವಿಸಿಒ ಮಳಿಗೆಗಳಲ್ಲಿ ಕೆಲಸ ಮಾಡುವ ಹಕ್ಕು ನಮಗೂ ಇದೆ ಎಂದು ಕೆಲ ಮಹಿಳೆಯರು ಕೋರ್ಟ್‌ ಮೆಟ್ಟಿಲೇರಿದ್ದರು. ಕೋರ್ಟ್ ನಿರ್ದೇಶನದಂತೆ, ಈಗ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗ ಅವರ ಸಂಖ್ಯೆ ಶೇ 50 ಮೀರಿದೆ’ ಎಂದು ಕೆಎಸ್‌ಬಿಸಿ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲುರಿ ಪ್ರತಿಕ್ರಿಯಿಸಿದರು.

‘ಮಹಿಳೆಯರನ್ನು ಮದ್ಯ ಮಾರಾಟ ಮಳಿಗೆಗಳಷ್ಟೇ ಅಲ್ಲದೆ ಗೋದಾಮು ಮತ್ತು ಆಡಳಿತ ಕಚೇರಿಗಳಲ್ಲೂ ನಿಯೋಜಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕ, ಎಜಿಎಂ (ನಿರ್ವಹಣೆ) ಹುದ್ದೆಗಳಲ್ಲೂ ಮಹಿಳೆಯರೇ ಇದ್ದಾರೆ. ಹೆಚ್ಚಿನ ಮಹಿಳೆಯರ ನಿಯೋಜನೆ ಕುರಿತಂತೆ ಇತರೆ ಇಲಾಖೆಗಳಿಗೂ ಬಿಇವಿಸಿಒ ಮಾದರಿ ಆಗಬೇಕು’ ಎಂದು ಹರ್ಷಿತಾ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT