ಪಂಪಾ: ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಮಹಿಳೆಯರನ್ನು ಪ್ರತಿಭಟನಾಕಾರರು ನೀಲಿಮಲೆಯಲ್ಲಿ ತಡೆದಿದ್ದಾರೆ, ಪಂಪಾದಿಂದ ಮೇಲೆ ಹತ್ತುತ್ತಿದ್ದಂತೆ ಮಹಿಳೆಯರನ್ನು ನೋಡಿದ 5 ಮಂದಿ ಪ್ರತಿಭಟನಾಕಾರರು ಶರಣಂ ಕೂಗಿ ಈ ಮಹಿಳೆಯರಿಗೆ ತಡೆಯೊಡ್ಡಿದ್ದಾರೆ.

ಈ ಹಿಂದೆ ಶಬರಿಮಲೆ ಪ್ರವೇಶಿಸಲು ಯತ್ನಿಸಿ ವಿಫಲವಾಗಿದ್ದ ರೇಶ್ಮಾ ವಿಶಾಂತ್ ಮತ್ತು ಶಾನಿಲಾ ಸಜೀಶ್ ಎಂಬ ಮಹಿಳೆಯರು ಬುಧವಾರ ಮುಂಜಾನೆ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಬುಧವಾರ ಮುಂಜಾನೆನಾಲ್ಕೂವರೆ ಗಂಟೆಗೆ ಇಬ್ಬರು ಮಹಿಳೆಯರು ಇರುವ ಎಂಟು ಮಂದಿ ಅಯ್ಯಪ್ಪ ಭಕ್ತರು ಪಂಪಾ ದಾಟಿ ನಡೆಯಲು ಆರಂಭಿಸಿದ್ದರು. ನೀಲಿಮಲೆಯ ವಾಟರ್ ಟ್ಯಾಂಕ್ ಬಳಿ ತಲುಪಿದಾಗ 5 ಮಂದಿ ಪ್ರತಿಭಟನಾಕಾರರು ಶರಣಂ ಕೂಗಿ ತಡೆಯೊಡ್ಡಿದ್ದಾರೆ.ಈ ಹೊತ್ತಿಗೆ ಅಲ್ಲಿ ಕೆಲವೇ ಪೊಲೀಸರು ಇದ್ದರೂ ಕ್ಷಣದಲ್ಲಿಯೇ ಹೆಚ್ಚಿನ ಪೊಲೀಸರು ಬಂದು ಮಹಿಳೆಯರಿಗೆ ರಕ್ಷಣೆ ಒದಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.