ಲಖನೌ: ರಾಜ್ಯದ ಪಶ್ಚಿಮ ಭಾಗದಲ್ಲಿ ನಡೆಯಲಿರುವ ಕನ್ವರ್ ಯಾತ್ರೆಯ ಅಂಗವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದರು.

ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಕನ್ವರ್ ಯಾತ್ರೆ ನಡೆದಿರಲಿಲ್ಲ. ಈ ಯಾತ್ರೆಯ ವೇಳೆ ಶಿವಭಕ್ತರು ಗಂಗಾ ಜಲವನ್ನು ಸಂಗ್ರಹಿಸಿ ಅದನ್ನು ದೇಗುಲಕ್ಕೆ ಕೊಂಡೊಯ್ದು ಸಮರ್ಪಿಸುತ್ತಾರೆ.

ಬಾಗ್ಪತ್ನಲ್ಲಿರುವ ಸಿದ್ಧಪೀಠ ಪರಶುರಾಮೇಶ್ವರ ಪುರಮಹಾದೇವ ದೇವಸ್ಥಾನಕ್ಕೆ ತಲುಪಿದ ಆದಿತ್ಯನಾಥ ಅವರು ತಮ್ಮ ಹೆಲಿಕಾಪ್ಟರ್ನಿಂದ ಶಿವಭಕ್ತರ (ಕನ್ವಾರಿಯಾ) ಮೇಲೆ ಪುಷ್ಪವೃಷ್ಟಿ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದರು.

ಕನ್ವರ್ ಯಾತ್ರೆಗಾಗಿ ಮಾಡಿರುವ ಸಿದ್ಧತೆಗಳನ್ನು ಆದಿತ್ಯನಾಥ ಅವರು ಪರಿಶೀಲಿಸಿದರು ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.