ನವದೆಹಲಿ: ಶುದ್ಧ ಸಸ್ಯಾಹಾರಿ ಆಹಾರ ವಿತರಣೆ ಮಾಡುವವರು (Pure Veg Fleet) ಹಸಿರು ಸಮವಸ್ತ್ರ ಧರಿಸಿ, ಹಸಿರು ಬಾಕ್ಸ್ಗಳಲ್ಲಿ ಡೆಲಿವರಿ ಮಾಡಬೇಕು ಎಂದು ಹೊರಡಿಸಿದ್ದ ಸೂಚನೆಯನ್ನು ಆನ್ಲೈನ್ ಆಹಾರ ವಿತರಣಾ ವೇದಿಕೆ ಜೊಮಾಟೊ ಸಂಸ್ಥೆ ಹಿಂಪಡೆದಿದೆ.

ಎಲ್ಲಾ ರೀತಿಯ ಆಹಾರ ವಿತರಕರು ಕೆಂಪು ಬಣ್ಣದ ಸಮವಸ್ತ್ರವನ್ನೇ ಧರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಸಾರ್ವಜನಿಕವಾಗಿ ಹಲವು ಟೀಕೆಗಳು ವ್ಯಕ್ತವಾದ ಹಿನ್ನೆಲೆ, ಆಹಾರ ವಿತರಣೆಯಲ್ಲಿ ಪ್ರತ್ಯೇಕತೆ ಮಾಡಲು ಬಯಸುವುದಿಲ್ಲ ಎಂದು ಜೊಮಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಫ್ಯೂರ್ ವೆಜ್ ಮೋಡ್ನಲ್ಲಿ ಸಸ್ಯಾಹಾರ ತಯಾರಿಸುವ ರೆಸ್ಟೊರೆಂಟ್ಗಳ ಪಟ್ಟಿ ಮಾತ್ರ ಇರುತ್ತದೆ. ಮಾಂಸಾಹಾರ ಪೂರೈಸುವ ರೆಸ್ಟೊರೆಂಟ್ಗಳು ಈ ಪಟ್ಟಿಯಲ್ಲಿ ಇರುವುದಿಲ್ಲ ಎಂದ ಅವರು ಎಕ್ಸ್ನಲ್ಲಿ ವಿಸ್ತ್ರತವಾಗಿ ಸಮರ್ಥನೆ ನೀಡಿದ್ದಾರೆ.

ಸಸ್ಯಾಹಾರಿಗಳಿಗೆ ಅನುಕೂಲ ಕಲ್ಪಿಸಲು ಈ ಸೇವೆ ಆರಂಭಿಸಲಾಗಿದೆ. ಶೇ 100ರಷ್ಟು ಸಸ್ಯಾಹಾರ ಪೂರೈಸಲಾಗುತ್ತದೆ. ಇದಕ್ಕಾಗಿ ‘ಫ್ಯೂರ್ ವೆಜ್ ಫ್ಲೀಟ್’ ಹಾಗೂ ‘ಫ್ಯೂರ್ ವೆಜ್ ಮೋಡ್’ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಜೊಮಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಅವರು, ಮಂಗಳವಾರ ‘ಎಕ್ಸ್’ನಲ್ಲಿ ತಿಳಿಸಿದ್ದರು.
.ಶುದ್ಧ ಸಸ್ಯಾಹಾರ ಸೇವೆ ಆರಂಭಿಸಿದ ಜೊಮಾಟೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.