ನವದೆಹಲಿ (ಪಿಟಿಐ): ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಬಗೆಗಿನ ಮಾಹಿತಿಯನ್ನು ವಿಕಿಪೀಡಿಯಾ ಮಾಹಿತಿಜಾಲದಲ್ಲಿ ಅವಹೇಳನಕಾರಿಯಾಗಿ ತಿದ್ದಿದ ಬಗ್ಗೆ ಕೇಂದ್ರ ಸರ್ಕಾರ ಬುಧವಾರ ತನಿಖೆಗೆ ಆದೇಶಿಸಿದೆ.

ವಿಕಿಪೀಡಿಯಾದಲ್ಲಿ ನೆಹರೂ ಅವರ ವೈಯಕ್ತಿಕ ಮಾಹಿತಿಗಳನ್ನು ಅವಹೇಳನಕಾರಿಯಾಗಿ ತಿದ್ದಲಾಗಿದೆ ಎಂದು ಜುಲೈ 1ರಂದು ಮಾಧ್ಯಮಗಳು ವರದಿ ಮಾಡಿದ್ದವು. ಆ ಬಳಿಕ ವಿಕಿಪೀಡಿಯಾ ಸರಿಯಾದ ಮಾಹಿತಿ ಪ್ರಕಟಿಸಿತ್ತು.

‘ವಿಕಿಪೀಡಿಯಾದಲ್ಲಿ ಮಾಹಿತಿ ತಿದ್ದಿದವರ ಪತ್ತೆಗಾಗಿ ತನಿಖೆಗೆ ಆದೇಶಿಸಲಾಗಿದೆ’ ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.

ವಿಕಿಪೀಡಿಯಾ ಸಾರ್ವಜನಿಕ ಮಾಹಿತಿಜಾಲವಾಗಿದೆ. ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಮಾಹಿತಿ ಸೇರಿಸುವ ಹಾಗೂ ತಿದ್ದುವ ಅವಕಾಶವಿದೆ. ಇದನ್ನು ದುರುಪಯೋಗಪಡಿಸಿಕೊಂಡಿರುವ ಕಿಡಿಗೇಡಿಗಳು ನೆಹರೂ ಕುರಿತ ಮಾಹಿತಿಯನ್ನು ತಿದ್ದಿದ್ದರು.

ಅವಹೇಳನಕಾರಿಯಾಗಿ ಮಾಹಿತಿ ತಿದ್ದಿದ ಕಿಡಿಕೇಡಿಗಳ ಐಪಿ ವಿಳಾಸ ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.