ಚೆನ್ನೈ: ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಐದನೇ ಬಾರಿಗೆ ಇಂದು (ಶನಿವಾರ) ಪ್ರಮಾಣ ವಚನ ಸ್ವೀಕರಿಸಿದರು.

ಈ ಮೂಲಕ ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ಎಂಟು ತಿಂಗಳು ರಾಜಕೀಯ ವನವಾಸಕ್ಕೆ ತೆರೆ ಬಿದ್ದಿದೆ.

ಮದ್ರಾಸ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರು ಜಯಲಲಿತಾ ಅವರಿಗೆ ಅಧಿಕಾರ ಗೌಪ್ಯತೆ ಹಾಗೂ ಪ್ರಮಾಣ ವಚನ ಬೋಧಿಸಿದರು.

ಹಸಿರು ಸೀರೆಯುಟ್ಟಿದ್ದ ಜಯಾ ಅವರು ‘ದೇವರ ಹೆಸರಿನಲ್ಲಿ’ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ರಾಜ್ಯಪಾಲ ರೋಸಯ್ಯ ಅವರು ಜಯಾ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.

28 ಸಚಿವರು: ಜಯಾ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರು ಸೇರಿದಂತೆ 28 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

ಗಣ್ಯರ ದಂಡು: ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕೇಂದ್ರ ಸಚಿವರಾದ ಪೊನ್ನ ರಾಧಾಕೃಷ್ಣನ್ ಅವರು ಎನ್‌ಡಿಎ ಮೈತ್ರಿಕೂಟದ ಪ್ರತಿನಿಧಿಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಲೋಕಸಭೆಯ ಉಪಸಭಾಧ್ಯಕ್ಷ ತಂಬಿದೊರೆ ಅವರೂ ಉಪಸ್ಥಿತರಿದ್ದರು.

ರಜಿನಿಕಾಂತ್ ಉಪಸ್ಥಿತಿ: ತಮಿಳು ಚಿತ್ರರಂಗದ ಖ್ಯಾತನಾಮರಾದ ರಜನಿಕಾಂತ್, ಇಳಯರಾಜಾ, ಶಿವಾಜಿ ಪ್ರಭು ಹಾಗೂ ಶರತ್‌ಕುಮಾರ್ ಅವರು ಜಯಾ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.