ಚೆನ್ನೈ: ಅಕ್ರಮವಾಗಿ ದೂರವಾಣಿ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ದೂರ ಸಂಪರ್ಕ ಇಲಾಖೆಯ ಮಾಜಿ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸಹೋದರ ಕಲಾನಿಧಿ ಮಾರನ್ ಅವರನ್ನು ಸಿಬಿಐ ವಿಶೇಷ ಕೋರ್ಟ್ ಬುಧವಾರ ಆರೋಪ ಮುಕ್ತಗೊಳಿಸಿದೆ.

ಇವರ ವಿರುದ್ಧ ಇರುವ ಯಾವುದೇ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿಲ್ಲ ಎಂದು ನ್ಯಾಯಾಧೀಶ ಎಸ್.ನಟರಾಜನ್ ಹೇಳಿದ್ದಾರೆ.

2004–06ನೇ ಸಾಲಿನಲ್ಲಿ ದಯಾನಿಧಿ ಅವರು ಸಚಿವರಾಗಿದ್ದ ವೇಳೆ ಅವರಿಗೆ ಒದಗಿಸಲಾಗಿದ್ದ 764 ದೂರವಾಣಿ ಸಂಪರ್ಕಗಳಿಗೆ ಶುಲ್ಕ ಪಾವತಿಸಿರಲಿಲ್ಲ. ಇದರಿಂದ ಬಿಎಸ್
ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗೆ ₹1.78 ಕೋಟಿ ನಷ್ಟವಾಗಿತ್ತು. ಜೊತೆಗೆ, ಕಲಾನಿಧಿ ಒಡೆತನದ ಸನ್ ಟಿ.ವಿಯ ಕಾರ್ಯಕ್ರಮಗಳ ವೇಗವಾದ ಸಂವಹನಕ್ಕಾಗಿ ಅಕ್ರಮವಾಗಿ ದೂರವಾಣಿ ತಂತಿಗಳನ್ನು ಬಳಸಿಕೊಳ್ಳಲಾಗಿದ್ದು, ಮಾರನ್ ಅವರ ಮನೆ ಟೆಲಿಫೋನ್ ಎಕ್ಸ್‌ಚೇಂಜ್ ಆಗಿ ಪರಿವರ್ತನೆ ಹೊಂದಿದೆ’ ಎಂದು ಸಿಬಿಐ ಆರೋಪಿಸಿತ್ತು.

ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದ ಮಾರನ್ ಸಹೋದರರು ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಕಕ್ಷಿದಾರರು ನಿಯತ್ತಿನವರಾಗಿದ್ದು ಯಾವುದೇ ನಷ್ಟ ಉಂಟು ಮಾಡಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು. ಅದನ್ನು ಕೋರ್ಟ್ ಮಾನ್ಯ ಮಾಡಿದೆ.

ಹೈಕೋರ್ಟ್‌ಗೆ ಮೇಲ್ಮನವಿ: ಮಾರನ್ ಸಹೋದರರನ್ನು ಆರೋಪಮುಕ್ತಗೊಳಿಸಿರುವ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.